ಕಂಚಿಕಟ್ಟೆ ಸೇತುವೆ ದುರಸ್ತಿಗಾಗಿ ಪುಟ್ಭಾಲ್ ಶೂಟೌಟ್

ಸೇತುವೆ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐನಿಂದ ಪುಟ್ಭಾಲ್ ಶೂಟೌಟ್ ಪ್ರತಿಭಟನೆ ನಡೆಯಿತು. ಮಂಜೇಶ್ವರ ಮಂಡಲ ಅಧ್ಯಕ್ಷ ನಾಸರ್ ಬಂಬ್ರಾಣ, ನೌಶಾದ್ ಕುಂಬಳೆ, ಅನ್ವರ್ ಆರಿಕ್ಕಾಡಿ, ಮೊಯ್ದಿನ್ ಕೊಡ್ಯಮೆ ಇತರರು ಇದ್ದರು.
ಸೇತುವೆ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐನಿಂದ ಪುಟ್ಭಾಲ್ ಶೂಟೌಟ್ ಪ್ರತಿಭಟನೆ ನಡೆಯಿತು. ಮಂಜೇಶ್ವರ ಮಂಡಲ ಅಧ್ಯಕ್ಷ ನಾಸರ್ ಬಂಬ್ರಾಣ, ನೌಶಾದ್ ಕುಂಬಳೆ, ಅನ್ವರ್ ಆರಿಕ್ಕಾಡಿ, ಮೊಯ್ದಿನ್ ಕೊಡ್ಯಮೆ ಇತರರು ಇದ್ದರು.
Published on
ಕುಂಬಳೆ: ಕಂಚಿಕಟ್ಟೆ ಸೇತುವೆ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐ ಕುಂಬಳೆ ಪಂಚಾಯಿತಿ ಸಮಿತಿ ವತಿಯಿಂದ ಸೇತುವೆ ಮೇಲೆ ಫುಟ್ಭಾಲ್ ಶೂಟೌಟ್ ಎಂಬ ವಿನೂತನ ಪ್ರತಿಭಟನೆ ನಡೆಯಿತು. ಮಂಜೇಶ್ವರ ಮಂಡಲ ಅಧ್ಯಕ್ಷ ನಾಸರ್ ಬಂಬ್ರಾಣ ಪ್ರತಿಭಟನೆಗೆ ಚಾಲನೆ ನೀಡಿದರು.

ಕಂಚಿಕಟ್ಟೆ ಸೇತುವೆಯ ದುರವಸ್ಥೆಯಿಂದ ಪ್ರಯಾಣಿಕರು ನಿತ್ಯ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ, ಪ್ರತಿಭಟನೆ ನಡೆಸಿದರೂ ಸಂಬಂಧಪಟ್ಟ ಇಲಾಖೆಗಳು ಸೇತುವೆ ನವೀಕರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಸರ್ ಬಂಬ್ರಾಣ ಆರೋಪಿಸಿದರು.
ಪಂಚಾಯಿತಿ ಸಮಿತಿ ಅಧ್ಯಕ್ಷ ನೌಶಾದ್ ಕುಂಬಳೆ, ಅನ್ವರ್ ಆರಿಕ್ಕಾಡಿ, ಮೊಯ್ದಿನ್ ಕೊಡ್ಯಮೆ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಸ್ಥಳೀಯರು ಪಾಲ್ಗೊಂಡಿದ್ದರು.
(ಪೋಟೋ ಬಿಡಿಕೆ_04 ಜುಲೈ_09(1)
ಸೇತುವೆ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐನಿಂದ ಪುಟ್ಭಾಲ್ ಶೂಟೌಟ್ ಪ್ರತಿಭಟನೆ ನಡೆಯಿತು. ಮಂಜೇಶ್ವರ ಮಂಡಲ ಅಧ್ಯಕ್ಷ ನಾಸರ್ ಬಂಬ್ರಾಣ, ನೌಶಾದ್ ಕುಂಬಳೆ, ಅನ್ವರ್ ಆರಿಕ್ಕಾಡಿ, ಮೊಯ್ದಿನ್ ಕೊಡ್ಯಮೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net