ಕಾಳಾವರ ಗ್ರಾಪಂ ಉಪಾಧ್ಯಕ್ಷೆ ಪಾರ್ವತಿ ಶೇರೆಗಾರ್ ಅಧ್ಯಕ್ಷತೆ ವಹಿಸಿದ್ದರು. ಗೋ ಪೂಜೆ ರಮೇಶ್ ಉಪಾಧ್ಯಾಯ ನಡೆಸಿಕೊಟ್ಟರು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಮಹಾ ಮಂಡಲದ ನಿರ್ದೇಶಕಿ ಮಮತಾ ಶೆಟ್ಟಿ, ಕಾಳಾವರ ಗ್ರಾಪಂ ಸದಸ್ಯರಾದ ರಘುರಾಮ್ ಶೆಟ್ಟಿ, ಚಂದ್ರ ಪೂಜಾರಿ, ಅಸೋಡು ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ರವಿರಾಜ್ ಶೆಟ್ಟಿ, ಅಸೋಡು ಕಾಮಧೇನು ಗೋಶಾಲೆ ಅಧ್ಯಕ್ಷ ರಮೇಶ ಉಪಾಧ್ಯಾಯ, ಕುಂದಾಪುರದ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ.ಅರುಣ್ ಹೆಗ್ಡೆ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಮಹಾ ಮಂಡಲ ಕುಂದಾಪುರ ವಲಯದ ವ್ಯವಸ್ಥಾಪಕ ನಿರ್ದೇಶಕ ಶಂಕರ್ ನಾಯ್ಕ, ಪಶು ವೈದ್ಯಾಧಿಕಾರಿಗಳಾದ ಡಾ.ಜಯಣ್ಣ, ಡಾ.ಪೂಜಿತಾ, ಡಾ.ಸಚಿನ್ ಉಪಸ್ಥಿತರಿದ್ದರು.