ತ್ರಿಭಾಷಾ ಸೂತ್ರ ಅನುಸರಣೆ ಒಳಿತು

 ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ‘ಸುವರ್ಣಾಕ್ಷರದ ಇತಿಹಾಸ ಕನ್ನಡ ಸಂಘ ಕಾಂತಾವರ’ ಕೃತಿಯನ್ನು ಅನಾವರಣಗೊಳಿಸಿದರು. ಪ್ರಮುಖರಾದ ಡಾ.ನಾ.ಮೊಗಸಾಲೆ, ಡಾ.ಬಿ.ಜನಾರ್ದನ ಭಟ್, ವಿಶ್ವನಾಥ ಶೆಣೈ ಮೊದಲಾದವರಿದ್ದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ‘ಸುವರ್ಣಾಕ್ಷರದ ಇತಿಹಾಸ ಕನ್ನಡ ಸಂಘ ಕಾಂತಾವರ’ ಕೃತಿಯನ್ನು ಅನಾವರಣಗೊಳಿಸಿದರು. ಪ್ರಮುಖರಾದ ಡಾ.ನಾ.ಮೊಗಸಾಲೆ, ಡಾ.ಬಿ.ಜನಾರ್ದನ ಭಟ್, ವಿಶ್ವನಾಥ ಶೆಣೈ ಮೊದಲಾದವರಿದ್ದರು.
Published on
ಕಾರ್ಕಳ: ಕನ್ನಡ ಮಾತೃಭಾಷೆಯಾಗಿ ರಾಜ್ಯ ಭಾಷೆಯಾಗಿರಬಹುದು. ಆದರೆ ಹಿಂದಿ ರಾಷ್ಟ್ರದ ಭಾಷೆ ಮತ್ತು ಇಂಗ್ಲಿಷ್ ಅಂತಾರಾಷ್ಟ್ರೀಯ ಸಂವಹನಕ್ಕೆ ಅಗತ್ಯವಿರುವ ಭಾಷೆಯಾಗಿದೆ. ಹಾಗಾಗಿ ಕನ್ನಡದ ಪ್ರೀತಿಯ ಜತೆಗೆ ತ್ರಿಭಾಷಾ ಸೂತ್ರವನ್ನು ಗೌರವಿಸಿ ಅನುಸರಿಸುವ ಕಾಳಜಿ ನಮ್ಮದಾಗಬೇಕು ಎಂದು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಕಾಂತಾವರ ಕನ್ನಡ ಸಂದ ವಚನ ವೇದಿಕೆಯಲ್ಲಿ ಮಂಗಳವಾರ ಸಂದ ಸುವರ್ಣ ಮಹೋತ್ಸವ ಸಮಾರೋಪದ ಅಧ್ಯಕ್ಷತೆ ವಹಿಸಿ ಡಾ.ಬಿ.ಜನಾರ್ದನ ಭಟ್ ಬರೆದ ‘ಸುವರ್ಣಾಕ್ಷರದ ಇತಿಹಾಸ ಕನ್ನಡ ಸಂ ಕಾಂತಾವರ’ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ಸಾಹಿತಿ ಡಾ.ನಾ.ಮೊಗಸಾಲೆ ಮಾತನಾಡಿ, ಕನ್ನಡ ಸಂದ ಮೂಲಕ ಹುಟ್ಟಿದ ಅಲ್ಲಮ ಪ್ರಭು ಪೀಠದ ಆಶ್ರಯದಲ್ಲಿ ಗುರುಕುಲ ಮಾದರಿಯ ಶಿಕ್ಷಣ ಸಂಸ್ಥೆ ಕಾಂತಾವರ ಪರಿಸರದಲ್ಲಿ ಶೈಕ್ಷಣಿಕವಾಗಿ ಹೊಸ ಚೈತನ್ಯ ಮೂಡಿಸಿರುವುದು ಧನ್ಯತೆಯ ಕ್ಷಣಗಳಾಗಿವೆ ಎಂದರು.
ಕೃತಿಕಾರ ಡಾ.ಬಿ.ಜನಾರ್ದನ ಭಟ್, ಉಡುಪಿ ಸಂಸ್ಕೃತಿ ಪ್ರತಿಷ್ಠಾನದ ವಿಶ್ವನಾಥ ಶೆಣೈ, ಉದ್ಯಮಿ ಕೆ.ಶ್ರೀಪತಿ ಭಟ್ ಉಪಸ್ಥಿತರಿದ್ದರು. ಕಾಂತಾವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ನಾಡಗೀತೆ ಹಾಡಿದರು. ಸಂದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ಸದಾನಂದ ಪೂಜಾರಿ ವಂದಿಸಿದರು.

ಕನ್ನಡ ಸಂದ ಐದು ದಶಕಗಳ ಸಾಂಸ್ಕೃತಿಕ ಕ್ರಾಂತಿಯನ್ನು ದಾಖಲಿಸುವ ಪ್ರಯತ್ನ ಈ ಕತಿಯಲ್ಲಿ ಮಾಡಲಾಗಿದ್ದು ಮುಂದಿನ ಹಂತದಲ್ಲಿ ಆಂಗ್ಲ ಅನುವಾದಿತ ಕೃತಿಯನ್ನೂ ಹೊರತರಲಾಗುವುದು.

— ಡಾ.ಬಿ.ಜನಾರ್ದನ ಭಟ್ ಕೃತಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net