ಸುಸ್ಥಿರ ಜೀವನೋಪಾಯ ಹಾದಿಯೆಡೆ ಚಿತ್ತ

ಜಿಲ್ಲಾಮಟ್ಟದ ಸಂಜೀವಿನಿ ವಾರಾಟ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವಿಜಯ ಕುವಾರ್ ಉದ್ಘಾಟಿಸಿದರು. ಸುಜಾತಾ, ಪ್ರಶಾಂತ್ ರಾವ್ ಎಂ.ವಿ., ಎಸ್.ಎ.ಪ್ರಸಾದ್, ರವಿ ಬಿ.ಕೆ., ಸದಾಶಿವ ಸೇರ್ವೆಗಾರ್ ಮತ್ತಿತರರಿದ್ದರು.

Published on
ಹೆಬ್ರಿ: ಸಂಜೀವಿನಿ ಯೋಜನೆಯ ಪ್ರಯೋಜನವನ್ನು ಪಡೆದು ಗ್ರಾಮೀಣ ಮಹಿಳೆಯರು ಸ್ವ ಇಚ್ಛೆಯಿಂದ ಸ್ವ ಉದ್ಯೋಗದತ್ತ ಗಮನಹರಿಸಿ ಸುಸ್ಥಿರ ಜೀವನೋಪಾಯ ಹಾದಿಯೆಡೆಗೆ ಸಾಗಬೇಕು ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವಿಜಯ ಕುವಾರ್ ಹೇಳಿದರು.
ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಉಡುಪಿ ಜಿಲ್ಲಾ ಪಂಚಾಯಿತಿ, ಹೆಬ್ರಿ ತಾಲೂಕು ಪಂಚಾಯಿತಿ, ಹೆಬ್ರಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಹೆಬ್ಬೇರಿ ಉತ್ಸವ ಪ್ರಯುಕ್ತ ಹೆಬ್ರಿ ಶ್ರೀ ರಾಮ ಮಂದಿರ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಸಂಜೀವಿನಿ ಮಾರಾಟ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಜೀವಿನಿ ಮಹಿಳೆಯರ ಸಬಲೀಕರಣ ಅಂಗವಾಗಿ ಬೈಕ್ ಜಾಥಾ ನಡೆಯಿತು. ಹೆಬ್ರಿ ಹೆಬ್ಬೇರಿ ಸಂಜೀವಿನಿ ತಾಲೂಕುಮಟ್ಟದ ಒಕ್ಕೂಟ ಅಧ್ಯಕ್ಷೆ ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಇಒ ಪ್ರಶಾಂತ್ ರಾವ್ ಎಂ.ವಿ., ತಹಸೀಲ್ದಾರ್ ಎಸ್.ಎ.ಪ್ರಸಾದ್, ಪಿಎಸ್‌ಐ ರವಿ ಬಿ.ಕೆ., ಪಿಡಿಒ ಸದಾಶಿವ ಸೇರ್ವೆಗಾರ್, ಮೆಸ್ಕಾಂ ಎಇಇ ನಾಗರಾಜ್, ಹೆಬ್ರಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್ ಡಿ., ಪ್ರಮುಖರಾದ ಹರೀಶ್, ನವ್ಯಾ ಹರೀಶ್, ಅವಿನಾಶ್, ಉವಾ ಪಿ., ಸುಕೇತಾ, ಬಬಿತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net