ಐವರು ವಿದ್ಯಾರ್ಥಿಗಳು 'ಪ್ರಮಾ' ಪ್ರಶಸ್ತಿಗೆ ಆಯ್ಕೆ

ಐವರು ವಿದ್ಯಾರ್ಥಿಗಳು 'ಪ್ರಮಾ' ಪ್ರಶಸ್ತಿಗೆ ಆಯ್ಕೆ
Published on: 

* ನ.14ರಂದು ಪುರಸ್ಕಾರ ಪ್ರದಾನ

ಉಡುಪಿ: ಮಕ್ಕಳ ದಿನಾಚರಣೆಯಂದು ಡಾ. ಪಳ್ಳತ್ತಡ್ಕ ಕೇಶವ ಭಟ್​ ಮೆಮೋರಿಯಲ್​ ಟ್ರಸ್ಟ್​ ವತಿಯಿಂದ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಪ್ರತಿಭಾವಂತ ಮಕ್ಕಳಿಗೆ ಕೊಡಮಾಡುವ 13ನೇ ವರ್ಷದ 'ಪ್ರಮಾ ಪ್ರಶಸ್ತಿ-2026'ಕ್ಕೆ ವಿವಿಧ ಕ್ಷೇತ್ರಗಳ ಐದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಶ್ರಾವಣೀ (ಸಂಸ್ಕೃತ), ಗವಿನ್​ ರೇಷಿಮೆ (ವಿಜ್ಞಾನ), ಶ್ರೇಯಾ. ಯು. ನಾಯಕ (ವಾದ್ಯ ಸಂಗೀತ), ವಿಶ್ರುತ ಸಾಮಗ (ಚಿತ್ರಕಲೆ), ಸೃಷ್ಟಿ ಆರ್​. (ಯಕ್ಷಗಾನ) ಪ್ರಶಸ್ತಿಗೆ ಆಯ್ಕೆಯಾದವರು. ಈ ಬಾರಿಯ ಶ್ರೇಯಸ್​ ಪ್ರಶಸ್ತಿಯನ್ನು ಪಾಕ ಶಾಸ್ತ್ರಜ್ಞ ಪ್ರಸನ್ನ ಭಟ್​ ಅವರಿಗೆ ನೀಡಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭವು ಮಣಿಪಾಲದಲ್ಲಿರುವ ಮಣಿಪಾಲ್​ ಡಾಟ್​ ನೆಟ್​ನ ಸಭಾಂಗಣದಲ್ಲಿ ನ.14ರಂದು ಸಂಜೆ 4:30ಕ್ಕೆ ನಡೆಯಲಿದೆ ಎಂದು ಟ್ರಸ್ಟ್​ನ ಪರವಾಗಿ ವಿದುಷಿ ಪವನಾ ಬಿ. ಆಚಾರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.