ಉಡುಪಿ ಜಿಲ್ಲೆಯ 5 ಗ್ರಾಪಂಗೆ ರಾಷ್ಟ್ರೀಯ ಪಂಚಾಯತ್​ ಪ್ರಶಸ್ತಿ

'ಬಡತನಮುಕ್ತ ಮತ್ತು ಸುಧಾರಿತ ಜೀವನೋಪಾಯ' ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ 1 ಕೋಟಿ ರೂ. ಬಹುಮಾನ ಗಳಿಸಿದ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ.
'ಬಡತನಮುಕ್ತ ಮತ್ತು ಸುಧಾರಿತ ಜೀವನೋಪಾಯ' ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ 1 ಕೋಟಿ ರೂ. ಬಹುಮಾನ ಗಳಿಸಿದ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ.
Published on

* ಕೇಂದ್ರದ ಡಿಡಿಯುಪಿಎಸ್​ವಿಪಿ ಪುರಸ್ಕಾರ

* ಅನುದಾನದ ಬಹುಮಾನ ಘೋಷಣೆ

* ಮುದ್ರಾಡಿ ಗ್ರಾಪಂಗೆ 1 ಕೋಟಿ ರೂ. ಬಹುಮಾನ

ಉಡುಪಿ: ಕೇಂದ್ರ ಸರ್ಕಾರದ ಪಂಚಾಯತ್​ ರಾಜ್​ ಸಚಿವಾಲಯ ಪ್ರಕಟಿಸಿದ 2025ನೇ ಸಾಲಿನ "ದೀನ ದಯಾಳ ಉಪಾಧ್ಯಾಯ ಪಂಚಾಯತ್​ ಸತತ ಅಭಿವೃದ್ಧಿ ಪುರಸ್ಕಾರ (ಡಿಡಿಯುಪಿಎಸ್​ವಿಪಿ)'ಕ್ಕೆ ಆಯ್ಕೆಯಾಗಿದ್ದ ಉಡುಪಿ ಜಿಲ್ಲೆಯ 5 ಗ್ರಾಪಂಗಳಿಗೆ ಅನುದಾನದ ಬಹುಮಾನ ಘೋಷಿಸಲಾಗಿದೆ.
ರಾಜ್ಯಗಳಿಗೆ ಕೊಡುವ ಒಟ್ಟು 6 ಪ್ರಶಸ್ತಿಗಳ ವಿಭಾಗದಲ್ಲಿ ಉಡುಪಿ ಜಿಲ್ಲೆಯ 5 ಗ್ರಾಪಂಗಳು 5 ವಿಭಾಗದಲ್ಲಿ ಆಯ್ಕೆಯಾಗಿ ಸಾಧನೆ ಮಾಡಿತ್ತು.
5 ಗ್ರಾಪಂಗಳ ಸಾಧನೆ ಏನು?
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಪಂ 'ಬಡತನಮುಕ್ತ ಮತ್ತು ಸುಧಾರಿತ ಜೀವನೋಪಾಯ' ವಿಭಾಗದಲ್ಲಿ, ಮಡಾಮಕ್ಕಿ ಗ್ರಾಪಂ 'ಜಲ ಸಮೃದ್ಧ' ವಿಭಾಗದಲ್ಲಿ, ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಪಂ 'ಆರೋಗ್ಯಕರ ಪಂಚಾಯತ್​' ವಿಭಾಗದಲ್ಲಿ, ಹಕ್ಲಾಡಿ ಗ್ರಾಪಂ 'ಸಾಮಾಜಿಕ ನ್ಯಾಯ ಮತ್ತು ಸುರಕ್ಷಿತ' ವಿಭಾಗದಲ್ಲಿ ಹಾಗೂ ಕಾರ್ಕಳ ತಾಲೂಕಿನ ಸಾಣೂರು ಗ್ರಾಪಂ 'ಮೂಲ ಸೌಕರ್ಯದಲ್ಲಿ ಸ್ವಾವಲಂಬಿ' ವಿಭಾಗದಲ್ಲಿ ಸಾಧನೆ ಮಾಡಿತ್ತು.
ಗಳಿಸಿದ ಬಹುಮಾನದ ಮೊತ್ತ
ತಾಲೂಕು              ಗ್ರಾಪಂ               ಸ್ಥಾನ             ಮೊತ್ತ
ಹೆಬ್ರಿ                   ಮುದ್ರಾಡಿ            ಪ್ರಥಮ           1 ಕೋಟಿ ರೂ.
ಹೆಬ್ರಿ                   ಮಡಾಮಕ್ಕಿ          ದ್ವಿತೀಯ         75 ಲಕ್ಷ ರೂ.
ಕುಂದಾಪುರ          ವಂಡ್ಸೆ                 ದ್ವಿತೀಯ         75 ಲಕ್ಷ ರೂ.
ಕುಂದಾಪುರ          ಹಕ್ಲಾಡಿ                ದ್ವಿತೀಯ         25 ಲಕ್ಷ ರೂ.
ಕಾರ್ಕಳ               ಸಾಣೂರು            ದ್ವಿತೀಯ         25 ಲಕ್ಷ ರೂ. 
"

ಕೇಂದ್ರ ಸರ್ಕಾರದ ರಾಷ್ಟ್ರೀಯ ಪಂಚಾಯತ್​ ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯ 5 ಗ್ರಾಪಂ ಆಯ್ಕೆಯಾಗಿದ್ದವು. ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ. ಇದೀಗ ಗ್ರಾಪಂಗಳಿಗೆ ಪ್ರಶಸ್ತಿ ಮೊತ್ತ ಘೋಷಿಸಲಾಗಿದ್ದು ಮುದ್ರಾಡಿ ಗ್ರಾಪಂಗೆ 1 ಕೋಟಿ ರೂ. ಲಭಿಸಿದೆ. ಸಾಧನೆ ಮಾಡಿರುವ ಎಲ್ಲ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಪ್ರಶಸ್ತಿ ನೀಡಿದ ಕೇಂದ್ರ ಸರ್ಕಾರವನ್ನೂ ನಾನು ಅಭಿನಂದಿಸುತ್ತೇನೆ.

— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net