ನಕ್ರೆ ಕೋಣಗಳಿಗೆ ಐದು ಪ್ರಥಮ ಸ್ಥಾನ

ಅಡ್ವೆ ಕೋಟಿ ಚೆನ್ನಯ ಜೋಡುಕರೆ ಕಂಬಳ ಸ್ಪರ್ಧೆಯ ಹಗ್ಗ ಹಿರಿಯ ವಿಭಾಗದಲ್ಲಿ ನಕ್ರೆ ಮಹೋದರ ನಿವಾಸ ಹಾಗೂ ನಂದಳಿಕೆ ಕೋಣಗಳ ನಡುವಿನ ಬಿರುಸಿನ ಸ್ಪರ್ಧೆ
ಅಡ್ವೆ ಕೋಟಿ ಚೆನ್ನಯ ಜೋಡುಕರೆ ಕಂಬಳ ಸ್ಪರ್ಧೆಯ ಹಗ್ಗ ಹಿರಿಯ ವಿಭಾಗದಲ್ಲಿ ನಕ್ರೆ ಮಹೋದರ ನಿವಾಸ ಹಾಗೂ ನಂದಳಿಕೆ ಕೋಣಗಳ ನಡುವಿನ ಬಿರುಸಿನ ಸ್ಪರ್ಧೆ
Published on
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಅಡ್ವೆ ಕೋಟಿ ಚೆನ್ನಯ ಜೋಡುಕರೆ ಕಂಬಳ ಸ್ಪರ್ಧೆಯ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆಯುವ ಮೂಲಕ ಪ್ರಸ್ತುತ ಕಂಬಳ ಋತುವಿನಲ್ಲಿ ಬೇರೆ ಬೇರೆ ಹೆಸರಿನಲ್ಲಿ ಸ್ಪರ್ಧೆಗಿಳಿದ ನಕ್ರೆ ಮಹೋದರ ನಿವಾಸದ ಕೋಣಗಳು 5 ಪ್ರಥಮ ಹಾಗೂ ಒಂದು ದ್ವಿತೀಯ ಸ್ಥಾನದ ಸಾಧನೆ ಮಾಡಿದೆ. ಈ ಕೋಣಗಳನ್ನು ಓಡಿಸಿದ ಕಕ್ಕೆಪದವು ಪೆಂರ್ಗಾಲ್ ಕೃತಿಕ್ ಗೌಡ ನಡುಮುಗೇರಗುತ್ತು ದಿ.ಕರುಣಾಕರ ಶೆಟ್ಟಿ ಸ್ಮರಣಾರ್ಥ ಒಂದು ಪವನ್ ಬಹುಮಾನವನ್ನು ಮುಡಿಗೇರಿಸಿಕೊಂಡರು.
ಕಳೆದ 3 ಕಂಬಳ ಋತುವಿನಲ್ಲಿ ಚಾಂಪಿಯನ್ ಆಗಿ ಮೂಡಿ ಬಂದಿದ್ದ ನಂದಳಿಕೆ ಶ್ರೀಕಾಂತ ಭಟ್ರ ಕೋಣಗಳು ಈ ಋತುವಿನ ಕಂಬಳಗಳಲ್ಲಿ ಈವರೆಗೆ ಯಶಸ್ಸನ್ನು ಕಾಣದೆ ಇದ್ದು, ಅಡ್ವೆ ನಂದಿಕೂರು ಕಂಬಳದಲ್ಲಿ ದ್ವಿತೀಯ ಸಾಧನೆ ಮಾಡಿವೆ.

ಫಲಿತಾಂಶ

33ನೇ ವರ್ಷದ ಅಡ್ವೆ ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ಕನೆ ಹಲಗೆ ವಿಭಾಗದಲ್ಲಿ 8, ಅಡ್ಡಹಲಗೆ 12, ಹಗ್ಗ ಹಿರಿಯ 17, ಹಗ್ಗ ಕಿರಿಯ 35, ನೇಗಿಲು ಹಿರಿಯ 22, ನೇಗಿಲು ಕಿರಿಯ ವಿಭಾಗದಲ್ಲಿ 77 ಜತೆ ಸೇರಿದಂತೆ ಒಟ್ಟು 171 ಜತೆ ಕೋಣಗಳು ಪಾಲ್ಗೊಂಡಿದ್ದವು.
ಕನೆ ಹಲಗೆ ವಿಭಾಗದಲ್ಲಿ ನಿಶಾನೆಗೆ ಯಾರೂ ನೀರು ಹಾಯಿಸದ ಕಾರಣ ಈ ವಿಭಾಗದಲ್ಲಿ ಭಾಗವಹಿಸಿದ ಎಲ್ಲ ಕೋಣಗಳಿಗೆ ಸವಾಧಾನಕರ ಬಹುವಾನ ನೀಡಲಾಯಿತು.
ಅಡ್ಡ ಹಲಗೆ: (ಪ್ರ) ನಾರ್ಯಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳ್ಯಾರು, ಓಡಿಸಿದವರು: ಬೈಂದೂರು ಮಹೇಶ್ ಪೂಜಾರಿ, (ದ್ವಿ) ನಾರಾವಿ ರಕ್ಷಿತ್ ಜೈನ್, ಓಡಿಸಿದವರು: ಭಟ್ಕಳ ಹರೀಶ್. ಹಗ್ಗ ಹಿರಿಯದಲ್ಲಿ ಪ್ರಥಮ ನಕ್ರೆ ಮಹೋದರ ನಿವಾಸ ಇಶಾನಿ ತುಕ್ರ ಭಂಡಾರಿ, ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ, ದ್ವಿತೀಯ ನಂದಳಿಕೆ ಶ್ರೀಕಾಂತ್ ಭಟ್ ‘ಎ’, ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ.
ಹಗ್ಗ ಕಿರಿಯದಲ್ಲಿ ಪ್ರಥಮ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಬಿ.ಶೆಟ್ಟಿ ‘ಬಿ’, ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ, ದ್ವಿತೀಯ ಶಿಬರೂರು ಮುಟ್ಟಿಕಲ್ಲು ಕೀರ್ತನ್ ರಾಜೇಶ್ ಪಾಣಾರ, ಓಡಿಸಿದವರು: ಕಡಂದಲೆ ಮುಡಾಯಿಬೆಟ್ಟು ರೋಹಿತ್ ಪಾಣಾರ.
ನೇಗಿಲು ಹಿರಿಯದಲ್ಲಿ ಪ್ರಥಮ 80ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ, ಓಡಿಸಿದವರು: ಕುಂದಬಾರಂದಡಿ ವಾಸ್ತಿಕಟ್ಟೆ ಸ್ವರೂಪ್, ದ್ವಿತೀಯ ನೂಜಿಪ್ಪಾಡಿ ಡಾ.ಪ್ರವೀಣ್ ಹೊಳ್ಳ, ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.
ನೇಗಿಲು ಕಿರಿಯದಲ್ಲಿ ಪ್ರಥಮ ಮುನಿಯಾಲು ಉದಯ ಕುವಾರ್ ಶೆಟ್ಟಿ ‘ಬಿ’, ಓಡಿಸಿದವರು: ಕುಂದಬಾರಂದಡಿ ವಾಸ್ತಿಕಟ್ಟೆ ಸ್ವರೂಪ್ ಹಾಗೂ ದ್ವಿತೀಯ ಅಡ್ಚೀಲು ಕುಂಜಾಲು ಧನ್ಯಶ್ರೀ ಹರೀಶ್ ನಾಯ್ಕ, ಓಡಿಸಿದವರು: ಈದು ಸುಮಂತ್ ಶೆಟ್ಟಿ.
ಕೂಟ ದಾಖಲೆ
ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ ಕೋಣಗಳನ್ನು ಓಡಿಸಿದ ಕುಂದಬಾರಂದಡಿ ವಾಸ್ತಿಕಟ್ಟೆ ಸ್ವರೂಪ್ ಅವರು ಕೊಳಚೂರು ಚೆನ್ನನ ಹೆಸರಿನಲ್ಲಿ ಕೊಡ ವಾಡಿದ ಅರ್ಧ ಪವನ್ ವಿಶೇಷ ಬಹುವಾನಕ್ಕೆ ಪಾತ್ರರಾದರು. ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಕೋಣಗಳು ಕ್ವಾರ್ಟರ್ ಫೈನಲ್‌ನಲ್ಲಿ 11.02 ಸಮಯದಲ್ಲಿ ಗುರಿ ತಲುಪಿ ಈವರೆಗೆ ಇದ್ದ ಅವರದ್ದೇ 11.14 ಸಮಯವನ್ನು ಮುರಿದು ಈ ಕೂಟದಲ್ಲಿ ದಾಖಲೆ ಬರೆಯಿತು.
* ೆಟೋ: ಪಿಡಿಬಿಜನ್191 ರಿಸಲ್ಟ್
ಅಡ್ವೆ ಕೋಟಿ ಚೆನ್ನಯ ಜೋಡುಕರೆ ಕಂಬಳ ಸ್ಪರ್ಧೆಯ ಹಗ್ಗ ಹಿರಿಯ ವಿಭಾಗದಲ್ಲಿ ನಕ್ರೆ ಮಹೋದರ ನಿವಾಸ ಹಾಗೂ ನಂದಳಿಕೆ ಕೋಣಗಳ ನಡುವಿನ ಬಿರುಸಿನ ಸ್ಪರ್ಧೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net