ನದಿಗೆ ಬಿದ್ದು ಮೀನುಗಾರ ಮೃತ್ಯು

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Death
Death
Published on: 

ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಬೋಟ್‌ನಿಂದ ಪಂಚಗಂಗಾವಳಿ ನದಿಗೆ ಬಿದ್ದು ಮೀನುಗಾರನೋರ್ವ ಬುಧವಾರ ಸಂಜೆ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಉತ್ತರ ಕನ್ನಡ ಜಿಲ್ಲೆಯ ಹಾರವಾಡ ನಿವಾಸಿ ಆನಂದು ಪಿ.ನಾಯ್ಕ (47) ಎಂದು ಗುರುತಿಸಲಾಗಿದೆ.

ಗಂಗೊಳ್ಳಿಯ ರಾಘವೇಂದ್ರ ಖಾರ್ವಿ ಎಂಬುವರ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆನಂದು ಗಂಗೊಳ್ಳಿ ಬಂದರಿನಲ್ಲಿ ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಮೀನುಗಾರರ ಸಹಾಯದಿಂದ ಕೂಡಲೇ ಅವರನ್ನು ನೀರಿನಿಂದ ಮೇಲಕ್ಕೆತ್ತಲಾಯಿತಾದರೂ ಆಗಲೇ ಮೃತಪಟ್ಟಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.