ಅಂಗಡಿಯೊಳಗಿದ್ದ ಕಂಪ್ರೆಸರ್, ಜನರೇಟರ್, ಟೂಲ್‌ಕಿಟ್, ಗ್ರಾಹಕರ ಟೈರ್ ಸಹಿತ ಎಲ್ಲವೂ ಸುಟ್ಟು ಹೋಗಿದೆ. ಬಿಹಾರ ಮೂಲದ ಸೈಫುಲ್ಲಾ ಎಂಬುವರು 10 ವರ್ಷದ ಹಿಂದೆ ಹೆಜಮಾಡಿಗೆ ಬಂದು ಟೈರ್ ಪಂಕ್ಚರ್ ಕೆಲಸ ಮಾಡುತ್ತಾ ಸ್ವಂತ ಅಂಗಡಿ ತೆರೆದು ವ್ಯವಹಾರ ನಡೆಸುತ್ತಿದ್ದರು. ಅದೇ ಅಂಗಡಿಯಲ್ಲಿ ಮಲಗುತ್ತಿದ್ದ ಅವರಿಗೆ ಘಟನೆ ಅರಿವಿಗೆ ಬರುತ್ತಿದ್ದಂತೆ ಎದ್ದು ಹೊರಬರುವಷ್ಟರಲ್ಲಿ ಬೆಂಕಿ ಅಂಗಡಿಯಿಡೀ ವ್ಯಾಪಿಸಿದ್ದು, ಟೈರ್‌ಗಳನ್ನೆಲ್ಲ ಸುಟ್ಟು ಹಾಕಿತ್ತು. ಸ್ಥಳೀಯರು ಮತ್ತು ಪಡುಬಿದ್ರಿ ಪೊಲೀಸರು ನೀರು ಹಾಯಿಸಿ ಬೆಂಕಿ ಶಮನ ಕಾರ್ಯ ಮಾಡಿದರು. ಬಳಿಕ ಉಡುಪಿ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದರು.