ಕುಂದಾಪುರ: ವಿದ್ಯಾರ್ಥಿಗಳು ಖಿನ್ನತೆ, ನಿದ್ರಾಹೀನತೆ, ವಾದಕ ಪದಾರ್ಥಗಳು, ಅತಿಯಾದ ಮೊಬೈಲ್ ಬಳಕೆ ಮುಂತಾದ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದು, ಸೂಕ್ತ ಸಮಯದಲ್ಲಿ ಅವುಗಳಿಗೆ ಪರಿಹಾರ ಕಂಡುಕೊಂಡು ಅಂತಹ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸಬೇಕು ಎಂದು ಖ್ಯಾತ ಮನೋವೈದ್ಯ ಪ್ರಕಾಶ್ ಸಿ.ತೋಳಾರ್ ಹೇಳಿದರು.
ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕುಂದಾಪುರ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ಕಾಲೇಜಿನ ರೆಡ್‌ಕ್ರಾಸ್ ವಿದ್ಯಾರ್ಥಿಗಳಿಗಾಗಿ ‘ಹದಿ ಹರೆಯದ ವಿದ್ಯಾರ್ಥಿಗಳ ವಾನಸಿಕ ಸಮಸ್ಯೆಗಳು ಮತ್ತು ಪರಿಹಾರಗಳು’ ಕುರಿತು ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ.ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಟಕ ಸಂಚಾಲಕ ರಾಜೇಶ್ ಹೆಬ್ಬಾರ್ ಸ್ವಾಗತಿಸಿ, ವರ್ಷಾ ಆರ್.ವಂದಿಸಿದರು. ವಿದ್ಯಾರ್ಥಿಗಳಾದ ವಿಶ್ವಾಸ್ ನಾಯಕ್ ನಿರೂಪಿಸಿದರು.