ಹಣಕಾಸು ವಿವಾದ, ಮೇಸ್ತ್ರಿಗೆ ಚೂರಿ ಇರಿತ

Crime
Crime
Published on
ಬಂಟ್ವಾಳ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ಧನುಪೂಜೆ ಸಮೀಪದ ಕಮ್ಮಾಜೆ ಎಂಬಲ್ಲಿ ವ್ಯಕ್ತಿಯೋರ್ವ ಮೇಸ್ತ್ರಿಯೋರ್ವರಿಗೆ ಚೂರಿಯಿಂದ ಇರಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಕಮ್ಮಾಜೆಯ ಮೂಡಾಯಿಕೋಡಿ ನಿವಾಸಿ ಎನ್ನಲಾದ ಪ್ರಶಾಂತ್ ಯಾನೆ ಪಚ್ಚು ಎಂಬಾತ ಮೇಸ್ತ್ರಿ ಪ್ರಶಾಂತ್ ಎಂಬುವರಿಗೆ ಚೂರಿಯಿಂದ ಇರಿದಿದ್ದಾನೆಂದು ತಿಳಿದು ಬಂದಿದೆ. ಗಾಯಾಳುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಈ ಘಟನೆ ನಡೆದಿದೆಯೆನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net