9ರಂದು ಪ್ರತಿಷ್ಠಾಪನಾ ವರ್ಧಂತಿ, 10 ಮತ್ತು 11ರಂದು ವಾರ್ಷಿಕ ಹಾಲು ಹಬ್ಬ, ಗೆಂಡೋತ್ಸವ, ತುಲಾಭಾರ ಸೇವೆ ನಡೆಯಲಿದೆ. 9ರಂದು ಬೆಳಗ್ಗೆ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಪಂಚವಿಂಶತಿ ದ್ರವ್ಯಕಲಶ ಪೂರ್ವಕ ಕಲಾತತ್ವ ಹೋಮ, ಪರಿವಾರ ದೇವರಿಗೆ ನವಕ ಪ್ರಧಾನ ಕಲಾಧಿವಾಸ ಹೋಮ, 10ರಂದು ಪಂಚಗವ್ಯ ಪೂಜೆ, ರಾತ್ರಿ 7ಕ್ಕೆ ನಾಗದೇವರ ಹಾಲಿಟ್ಟು ಸೇವೆ, ರಾತ್ರಿ 7.30ಕ್ಕೆ ಗೆಂಡಸೇವೆ, 9ಕ್ಕೆ ಅಮ್ಮನವರ ಹಾಗೂ ಬೊಬ್ಬರ್ಯ ದೇವರ ಹಾಲಿಟ್ಟು ಸೇವೆ, ಮಧ್ಯಾಹ್ನ 12.30ಕ್ಕೆ ಹಾಗೂ 10ರಂದು ರಾತ್ರಿ ಗೆಂಡಸೇವೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.