ಬೇರಿಕೆಯಲ್ಲಿ ರಸ್ತೆ ಸಮುದ್ರಪಾಲಾಗುವ ಭೀತಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಉಪ್ಪಳ: ಉಪ್ಪಳ ಶಿವಾಜಿನಗರದಲ್ಲಿ ಕಡಲ್ಕೊರೆತದಿಂದ ಮನೆ ಸಮುದ್ರ ಪಾಲಾದ ಬೆನ್ನಲ್ಲೇ ಮಂಗಲ್ಪಾಡಿ ಪಂಚಾಯಿತಿಯ ಮುಟ್ಟಂ ಬೇರಿಕೆಯಲ್ಲಿ ರಸ್ತೆ ಸಮುದ್ರಪಾಲಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಈ ರಸ್ತೆ ಸಂಪೂರ್ಣ ನೀರುಪಾಲಾದರೆ ಈ ಪ್ರದೇಶದ ನೆಬಿನ್, ಇಬ್ರಾಹಿಂ, ಅನಿಲ್, ಆನಂದ ಎಂಬುವರ ಮನೆಗಳಿಗೂ ಅಪಾಯವಾಗಲಿದೆ.

ಕಳೆದೆರಡು ದಿನಗಳಿಂದ ಈ ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಶಾರದಾನಗರದಲ್ಲಿ ಶಶಿಕಲಾ ಎಂಬುವರ ಮನೆ ನೀರುಪಾಲಾಗಿದ್ದು, ಇಲ್ಲಿನ ಲಲಿತಾ, ನಿವೇದಿತಾ, ಗಿರಿಜಾ ಎಂಬವರ ಮನೆಗಳು ಅಪಾಯದಂಚಿನಲ್ಲಿರುವುದರಿಂದ ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net