ಸ್ಲಾಬ್ ಇಲ್ಲದ ಚರಂಡಿಗೆ ಬೀಳುವ ಆತಂಕ

 ಪಾಣೆಮಂಗಳೂರಿನಲ್ಲಿ ಚರಂಡಿಯ ಸಿಮೆಂಟ್ ಸ್ಲಾೃಬ್ ಕುಸಿದಿರುವುದು.
ಪಾಣೆಮಂಗಳೂರಿನಲ್ಲಿ ಚರಂಡಿಯ ಸಿಮೆಂಟ್ ಸ್ಲಾೃಬ್ ಕುಸಿದಿರುವುದು.
Published on
ಬಂಟ್ವಾಳ: ಇಲ್ಲಿ ನಡೆದುಕೊಂಡು ಹೋಗುವ ವೇಳೆ ನೆಲ ನೋಡದಿದ್ದರೆ ಚರಂಡಿಗೆ ಬೀಳುವುದು ಗ್ಯಾರಂಟಿ... ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿರುವ ಸರ್ವೀಸ್ ರಸ್ತೆಯ ಸ್ಥಿತಿ ಇದು. ಕಲ್ಲಡ್ಕದಲ್ಲೂ ಸ್ಥಿತಿ ಭಿನ್ನವೇನಿಲ್ಲ.
ಬಿ.ಸಿ.ರೋಡ್‌ನಿಂದ ಕಲ್ಲಡ್ಕ ಕಡೆ ಸಾಗುವ ವೇಳೆ ಪಾಣೆಮಂಗಳೂರಿನಲ್ಲಿ ಅಂಡರ್‌ಪಾಸ್ ಫ್ಲೈಓವರ್ ಇದೆ. ಇದರ ಬದಿಯಲ್ಲಿ ಸರ್ವೀಸ್ ರಸ್ತೆ ಇದ್ದು, ಇದು ನರಿಕೊಂಬು ಕ್ರಾಸ್, ಮೆಲ್ಕಾರ್ ಕಡೆಗೆ ಸಾಗುತ್ತದೆ. ಈ ರಸ್ತೆಯಂಚಿನಲ್ಲಿರುವ ಚರಂಡಿಗೆ ಮುಚ್ಚಳ ಹಾಕಲಾಗಿದ್ದು, ಅದು ಪಾದಚಾರಿಗಳಿಗೂ ಅನುಕೂಲವಾಗಿದೆ. ಆದರೆ ಕೆಲವೊಂದು ಭಾಗಗಳಲ್ಲಿ ಸ್ಲಾೃಬ್‌ನ ಸಿಮೆಂಟಿನ ಅಂಶಗಳು ಉದುರಿಹೋಗಿ ಕಬ್ಬಿಣದ ಸರಳುಗಳು ಕಂಡುಬಂದರೆ, ಕೆಲವೆಡೆ ಮುಚ್ಚಳವೇ ತೆರೆದುಕೊಂಡಿದೆ.
ನರಿಕೊಂಬು ಕ್ರಾಸ್ ಕಡೆಯಿಂದ ಮೆಲ್ಕಾರ್ ಕಡೆಗೆ ಸಾಗುವ ವೇಳೆ ಎಡಭಾಗದಲ್ಲಿ ಹಲವು ಮಳಿಗೆಗಳು ಇವೆ. ಇಲ್ಲಿರುವ ಚರಂಡಿಗೆ ಸ್ಲಾೃಬ್ ಮುಚ್ಚಳ ಹಾಕಲಾಗಿದೆ. ಆದರೆ ಅಲ್ಲಲ್ಲಿ ಮುಚ್ಚಳ ಕಿತ್ತುಹೋಗಿರುವುದು ಕಂಡುಬಂದರೆ, ಕೆಲವೆಡೆ ಸ್ಲಾೃಬ್ ಕುಸಿದುಬಿದ್ದಿದೆ. ಹೀಗಾಗಿ ನಡೆದುಕೊಂಡು ಹೋಗುವವರು ಸ್ವಲ್ಪ ಎಚ್ಚರ ವಹಿಸಿದರೂ ಸಮಸ್ಯೆ ಅನುಭವಿಸುವುದು ಖಚಿತ. ಮಳೆ ಬಂದಾಗ ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತದೆ. ನೀರು ತುಂಬಿದ ಜಾಗದಲ್ಲಿ ಕಾಲಿಡುವುದು ಎಲ್ಲಿ ಎಂದೇ ಗೊತ್ತಾಗುವುದಿಲ್ಲ.
ಕಲ್ಲಡ್ಕದಲ್ಲೂ ಇದೇ ಸ್ಥಿತಿ
ಕಲ್ಲಡ್ಕದ ಫ್ಲೈ ಓವರ್ ಕೆಳಗೆ ಇರುವ ಸರ್ವೀಸ್ ರಸ್ತೆಬದಿಯ ಪಾದಚಾರಿ ಮಾರ್ಗ ಬಹಳ ಅಪಾಯಕಾರಿಯಾಗಿದೆ. ಅಲ್ಲಿ ಬೀದಿ ದೀಪ ಇಲ್ಲ. ಅಂಗಡಿಯ ಬೆಳಕು, ಚಲಿಸುವ ವಾಹನಗಳ ಬೆಳಕು ಮಾತ್ರ ನಂಬಿಕೊಂಡು ರಾತ್ರಿ ಸಂಚರಿಸಬೇಕು. ಇಲ್ಲಿ ಕಾಲ್ನಡಿಗೆಯಲ್ಲಿ ಸಾಗುವ ವೇಳೆ ಕೆಲವೆಡೆ ಸ್ಲಾೃಬ್‌ಗಳು ಎದ್ದಿರುವುದು ಕಂಡುಬಂದಿದೆ. ಎಲ್ಲಿ ಕಬ್ಬಿಣದ ಸರಳು ಕಾಲಿಗೆ ಸಿಲುಕಿ ಅಥವಾ ಕಾಲು ಸರಳಿಗೆ ಸಿಲುಕಿ ಮುಗ್ಗರಿಸಿ ಬೀಳುತ್ತೇವೋ ಅನ್ನುವ ಭಯ ಕಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜತೆಗೆ ಅಲ್ಲಲ್ಲಿ ಆ ಸ್ಲಾೃಬ್ ಒಡೆದಿದ್ದು, ನಡೆಯುವಾಗ ಸ್ವಲ್ಪ ಗಮನ ತಪ್ಪಿದರೂ ಕಾಲು ಗುಂಡಿಯಲ್ಲಿ ಸಿಲುಕುವ ಅಪಾಯ ಕಾದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net