ಶಾಲೆ ಕಾಂಪೌಂಡ್ ಕುಸಿಯುವ ಭೀತಿ

 ಬಿ.ಮೂಡ ಸರ್ಕಾರಿ ಶಾಲೆಯ ಆವರಣೆ ಗೋಡೆ ಬೀಳುವ ಸ್ಥಿತಿಯಲ್ಲಿರುವುದು.
ಬಿ.ಮೂಡ ಸರ್ಕಾರಿ ಶಾಲೆಯ ಆವರಣೆ ಗೋಡೆ ಬೀಳುವ ಸ್ಥಿತಿಯಲ್ಲಿರುವುದು.
Published on
ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿ.ಸಿ.ರೋಡಿನ ಬಿ.ಮೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಗೋಡೆ ಭಾಗಶಃ ಈಗಾಗಲೇ ಕುಸಿದು ಬಿದ್ದಿದ್ದು, ಉಳಿದ ಭಾಗವೂ ಕುಸಿಯುವ ಹಂತಕ್ಕೆ ತಲುಪಿರುವುದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ.
ಶಾಲೆಯ ಆವರಣಗೋಡೆ ಕಳೆದ ವರ್ಷ ಮಳೆಗಾಲದಲ್ಲಿ ಕುಸಿದು ಬಿದ್ದಿತ್ತು. ಹೊಸ ಆವರಣಗೋಡೆ ನಿರ್ವಾಣಗೊಳ್ಳಬಹುದೆಂಬ ಭರವಸೆ ವರ್ಷ ಕಳೆದರೂ ಈಡೇರಿಲ್ಲ. ಇದರಿಂದಾಗಿ ಶಾಲಾ ಆವರಣ ಸಂಪೂರ್ಣ ತೆರೆದ ಪ್ರದೇಶವಾಗಿ ವಾರ್ಪಟ್ಟಿದ್ದು, ವಿದ್ಯಾರ್ಥಿಗಳ ಭದ್ರತೆ ಬಗ್ಗೆ ಶಿಕ್ಷಕರು ಹಾಗೂ ಪಾಲಕರು ಚಿಂತಿತರಾಗಿದ್ದಾರೆ.
ಶಾಲೆಯ ಮುಖ್ಯ ಪ್ರವೇಶದ್ವಾರದಲ್ಲಿ ಗೇಟ್ ಹಾಗೂ ಅದನ್ನು ಅಳವಡಿಸಲು ನಿರ್ಮಿಸಿರುವ ಪಿಲ್ಲರ್ ವಾತ್ರ ಉಳಿದಿದೆ. ಎರಡೂ ಬದಿಗಳಲ್ಲಿ ರಕ್ಷಣಾಗೋಡೆ ಇಲ್ಲದಿರುವುದು ಶಾಲಾ ಆವರಣಕ್ಕೆ ಅಪರಿಚಿತರು, ಜಾನುವಾರುಗಳು ಸುಲಭವಾಗಿ ಪ್ರವೇಶಿಸಲು ಅವಕಾಶ ವಾಡಿಕೊಟ್ಟಂತಾಗಿದೆ. ಸಿಸಿ ಕ್ಯಾಮರ ವ್ಯವಸ್ಥೆಯೂ ಇಲ್ಲದ ಕಾರಣ ಶಾಲೆಯ ಭದ್ರತೆಗೆ ಸಾವಲಾಗಿದೆ.
ಶೌಚಗೃಹಕ್ಕೆ ಹೋಗಲೂ ಭಯ: ಕುಸಿದಿರುವ ಆವರಣ ಗೋಡೆಯ ಬಳಿ ಇರುವ ಶಾಲೆಯ ಶೌಚಗೃಹ ಹಾಗೂ ಕೈ ತೊಳೆಯುವ ಸ್ಥಳದಲ್ಲಿ ಕಲ್ಲುಗಳು ನೇತಾಡುವ ಸ್ಥಿತಿಯಲ್ಲಿರುವುದರಿಂದ ಪುಟ್ಟ ಮಕ್ಕಳು ಶೌಚಗೃಹಕ್ಕೆ ತೆರಳುವಾಗ ಮುನ್ನೆಚ್ಚರಿಕೆ ಸಲುವಾಗಿ ಶಿಕ್ಷಕರು ಜತೆಯಾಗಿಯೇ ತೆರಳಬೇಕಾದ ಅನಿವಾರ್ಯತೆ ಇದೆ. ಶೌಚಗೃಹ ಶಾಲೆಯ ಆವರಣದಿಂದ ಸ್ವಲ್ಪ ದೂರದಿಲ್ಲಿರುವ ಕಾರಣ ಮಳೆಗಾಲದಲ್ಲಿ ಮಕ್ಕಳು ಹೋಗುವುದೇ ಸಾಹಸವಾಗಿದೆ. ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಗೃಹ ಅಗತ್ಯವಿದ್ದು, ಜತೆಗೆ ಬಿಸಿಯೂಟ ಕೊಠಡಿಯ ಕೆಳಭಾಗವೂ ಹಾನಿಯಾಗಿದೆ.

ಶಿಕ್ಷಣ ಇಲಾಖೆ ಮೌನ

ಕಾಂಪೌಂಡ್ ಹಾಗೂ ಶೌಚಗೃಹದ ದುಸ್ಥಿತಿ ಕುರಿತು ಕಳೆದ ವರ್ಷವೇ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದರೂ ನಿರ್ಲಕ್ಷಿಸಲಾಗಿತ್ತು. ಮಳೆಗಾಲ ಆರಂಭವಾದ ಕೆಲವೇ ದಿನಗಳಲ್ಲಿ ಉಳಿದ ಗೋಡೆಯೂ ಕುಸಿಯುವ ಸಂಭವವಿದ್ದು, ಶಾಲೆಗೆ ಅಗತ್ಯವಿರುವ ಕಟ್ಟಡಗಳು, ಮೂಲಸೌಕರ್ಯಗಳನ್ನು ಶಿಕ್ಷಣ ಇಲಾಖೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶೈಕ್ಷಣಿಕವಾಗಿ ಮಾದರಿ ಹೆಜ್ಜೆ

ಬಿ.ಮೂಡ ಸ.ಹಿ.ಪ್ರಾ. ಶಾಲೆ ಮೂಲಸೌಕರ್ಯ ಸಮಸ್ಯೆಗಳ ನಡುವೆಯೂ ಶೈಕ್ಷಣಿಕವಾಗಿ ವಾದರಿ ಹೆಜ್ಜೆ ಇಡುತ್ತಿದೆ. ಶಾಲಾಭಿವೃದ್ಧಿ ಸಮಿತಿಯ ಪ್ರಯತ್ನದಿಂದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದ್ದು, ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚಾಗಿದೆ. ದಾನಿಗಳ ಸಹಕಾರದಿಂದ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ಇದುವರೆಗೆ ಹಿರಿಯ ತರಗತಿಯ ವಿದ್ಯಾರ್ಥಿಗಳಿಗೆ ವಾತ್ರ ನೀಡಲಾಗುತ್ತಿದ್ದ ಕಂಪ್ಯೂಟರ್ ಶಿಕ್ಷಣವನ್ನು ಈ ಶೆಕ್ಷಣಿಕ ವರ್ಷದಿಂದ 1ನೇ ತರಗತಿಯಿಂದಲೇ ಆರಂಭಿಸಲು ಯೋಜಿಸಲಾಗಿದೆ. ಪ್ರಾಜೆಕ್ಟರ್ ಮೂಲಕ ದಶ್ಯಾಧರಿತ ಬೋಧನೆ ನಡೆಸಲಾಗುತ್ತಿದ್ದು, ಮಕ್ಕಳ ಕಲಿಕೆಯಲ್ಲಿ ಹೊಸ ಆಸಕ್ತಿ ಮೂಡಿಸಿದೆ.

ಶಾಲಾ ಆವರಣ ಗೋಡೆ ಕಳೆದ ವರ್ಷವೇ ಕುಸಿದು ಬಿದ್ದಿರುವ ಕುರಿತು ಈಗಾಗಲೇ ಹಲವು ಬಾರಿ ಶಿಕ್ಷಣ ಇಲಾಖೆ ಗಮನಕ್ಕೆ ತಂದರೂ ನಿರ್ಲಕ್ಷಿಸಲಾಗಿದೆ. ಕುಸಿದಿರುವ ಕಂಪೌಂಡಿನ ಪಕ್ಕದಲ್ಲೇ ಇರುವ ಶೌಚಗೃಹಕ್ಕೆ ಆತಂಕದಲ್ಲೇ ದಿನವೂ ಮಕ್ಕಳು ಬರುತ್ತಾರೆ. ಅನಾಹುತ ಸಂಭವಿಸುವ ಮೊದಲೇ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಬೇಕು.

— ಲಕ್ಷ್ಮೀ, ಮುಖ್ಯಶಿಕ್ಷಕಿ

ನಮ್ಮೂರಿನ ಸರ್ಕಾರಿ ಶಾಲೆ ಎಂಬ ಅಭಿವಾನದಿಂದ ನಾವು ಮಕ್ಕಳನ್ನು ಅಜ್ಜಿಬೆಟ್ಟು ಶಾಲೆಗೆ ಕಳುಹಿಸುತ್ತಿದ್ದೇವೆ. ಶಾಲೆಯಲ್ಲಿ ಉತ್ತಮ ಶಿಕ್ಷಣದ ಜತೆಗೆ ವಿಷಯಾಧಾರಿತ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ. ಆದರೆ ಶಾಲೆಯ ಭದ್ರತೆಯ ದೃಷ್ಟಿಯಿಂದ ನೋಡಿದರೆ ಪರಿಸ್ಥಿತಿ ಆತಂಕಕಾರಿ. ಶಾಲೆಯ ಹಿಂಭಾಗದ ಆವರಣಗೋಡೆ ಕುಸಿದು ಹೋಗಿದ್ದು, ಸಂಬಂಧಪಟ್ಟ ಇಲಾಖೆ ತಕ್ಷಣ ಗಮನಹರಿಸಿ ಶಾಶ್ವತ ಆವರಣ ಗೋಡೆ ನಿರ್ಮಿಸಬೇಕು.

— ರಜನೀಶ್, ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net