ಕಳೆದ ಮುಂಗಾರಿನಲ್ಲಿ ಪ್ರಾತ್ಯಕ್ಷಿಕೆಯಾಗಿ ಕಜೆ ಜಯ ಭತ್ತ ತಳಿಯನ್ನು ಶಿರ್ವ ಗ್ರಾಮದಲ್ಲಿ ಬೆಳೆಯಲಾಗಿತ್ತು. ಈ ಬಾರಿ ಸಹ್ಯಾದ್ರಿ ಬ್ರಹ್ಮ, ಸಹ್ಯಾದ್ರಿ ಎಂಒ23, ಕೆಂಪುಮುಕ್ತಿ ಭತ್ತ ತಳಿಯನ್ನು ತಾಲೂಕಿನಲ್ಲಿ ಪ್ರಾತ್ಯಕ್ಷಿಕೆಯಾಗಿ ಬಿತ್ತನೆ ಮಾಡಲಾಗುತ್ತಿದೆ. ತಾಲೂಕಿನ ಪಾದೂರು ಗ್ರಾಮಕ್ಕೆ 100 ಕೆ.ಜಿ., ಬಡಾ 100, ಶಿರ್ವ 125, ಬೆಳಪು 125, ಎಲ್ಲೂರು 50, ಸಾಂತೂರು 75, ತೆಂಕ 25, ಮಲ್ಲಾರು 50, ಬೆಳ್ಳೆ 50, ಇನ್ನಂಜೆ 50, ಪಾದೆಬೆಟ್ಟು 25 ಹಾಗೂ ಕುತ್ಯಾರಿಗೆ 25 ಕೆಜಿ ಬೀಜ ವಿತರಿಸಲಾಗಿದೆ.