ಕಾಡಾನೆ ದಾಳಿಗೆ ಕೃಷಿಕರು ಕಂಗಾಲು

ಅಮ್ಚಿನಡ್ಕ ಮುಖಾರಿಮೂಲೆಯ ಅಬ್ದುಲ್ ರಝಾಕ್ ಅವರ ತೋಟಕ್ಕೆ ಕಾಡಾನೆಗಳು ನುಗ್ಗಿ ಕೃಷಿ ಹಾನಿಗೊಳಿಸಿವೆ.
ಅಮ್ಚಿನಡ್ಕ ಮುಖಾರಿಮೂಲೆಯ ಅಬ್ದುಲ್ ರಝಾಕ್ ಅವರ ತೋಟಕ್ಕೆ ಕಾಡಾನೆಗಳು ನುಗ್ಗಿ ಕೃಷಿ ಹಾನಿಗೊಳಿಸಿವೆ.
Published on
ಪುತ್ತೂರು ಗ್ರಾವಾಂತರ: ವಾಡ್ನೂರು ಗ್ರಾಮದ ಅಮ್ಚಿನಡ್ಕ ವ್ಯಾಪ್ತಿಯಲ್ಲಿ ಸತತ ಎರಡು ದಿನಗಳಿಂದ ನಡೆದ ಕಾಡಾನೆ ದಾಳಿಯಲ್ಲಿ ಅಪಾರ ಕೃಷಿ ಹಾನಿಯಾಗಿರುವ ಕುರಿತು ಮಾಹಿತಿ ನೀಡಿದರೂ, ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಕುರಿತು ಅಮ್ಚಿನಡ್ಕದ ಕೃಷಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 ಮುಖಾರಿಮೂಲೆ ಭಾಗಕ್ಕೆ ಶನಿವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿದ್ದು, ಅಬ್ದುಲ್ ರಝಾಕ್, ಯೂಸುಫ್, ಹಸೈನಾರ್, ಬೀರಾಮೊಯ್ದೀನ್ ಅವರ ತೋಟಗಳಲ್ಲಿದ್ದ ಬಾಳೆಕೃಷಿ, ಅಡಕೆ, ಹಲಸು ಮರಗಳನ್ನು ನಾಶಪಡಿಸಿವೆ. ತೋಟಗಳಲ್ಲಿ ಅಳವಡಿಸಿದ್ದ ನೀರಿನ ಪೈಪ್‌ಗಳು ಕೂಡ ಕಾಡಾನೆಯ ತುಳಿತದಿಂದ ಒಡೆದಿವೆ. ಶುಕ್ರವಾರ ರಾತ್ರಿ ಕೂಡ ಈ ಭಾಗದ ತೋಟಗಳಿಗೆ ಕಾಡಾನೆಗಳು ದಾಳಿ ಮಾಡಿದ್ದವು. 

ವಿದ್ಯುತ್ ವ್ಯವಸ್ಥೆಗೂ ಹಾನಿ

 ಕೃಷಿಕ ಅಬ್ದುಲ್ ರಜಾಕ್ ಮಾಹಿತಿ ನೀಡಿ, ಪಂಪ್‌ಶೆಡ್ ಪಕ್ಕದಲ್ಲೇ ಕಾಡಾನೆಗಳು ಸಂಚರಿಸಿದ್ದು, ಪಂಪ್‌ಗೆ ಕಲ್ಪಿಸಿದ್ದ ವಿದ್ಯುತ್ ವಯರ್, ಪಂಪ್ ಮೀಟರ್ ಕೆಳಗೆ ಬಿದ್ದಿವೆ. ನಸುಕಿನ ವೇಳೆ ಅಮ್ಚಿನಡ್ಕದ ಕೃಷಿಕ ಶರತ್‌ಕುಮಾರ್ ರೈ ಅವರ ತೋಟದ ಮೂಲಕ ಹಾದು ಹೋಗಿದೆ ಎಂದು ತಿಳಿಸಿದರು.
 ಕಳೆದ ವರ್ಷವೂ ಮುಖಾರಿಮೂಲೆ ಪ್ರದೇಶದ ಕೃಷಿಕರ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿದ್ದವು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಹಾನಿಯಾಗಿರುವ ಕುರಿತು ಅರ್ಜಿ ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದ್ದರು. ಬಳಿಕ ಕೃಷಿಕರು ಸಲ್ಲಿಸಿದ ಅರ್ಜಿಗೆ ಇಲಾಖೆ ಕಡೆಯಿಂದ ಸ್ಪಂದನೆ ದೊರೆತಿರಲಿಲ್ಲ. ಜತೆಗೆ ಕಾಡು ಹಂದಿ, ಮಂಗಗಳ ಉಪಟಳವೂ ಮಿತಿಮೀರಿ ಕೃಷಿಕರಿಗೆ ಭಾರಿ ತೊಂದರೆಯಾಗುತ್ತಿದೆ ಎಂದು ಅಮ್ಚಿನಡ್ಕ ಕೃಷಿಕರು ದೂರಿದ್ದಾರೆ.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net