ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಣ ಭಾಗದ ನೂರಾರು ಎಕರೆ ಕೃಷಿ ಭೂಮಿ ಸೀತಾ ನದಿಯ ಉಪ್ಪು ನೀರು ಆವರಿಸಿರುವುದರಿಂದ ಹಾನಿಗೊಳಗಾಗಿದೆ. ಇದರಿಂದಾಗಿ ಕೃಷಿ ಕಾಯಕದಿಂದ ಇಲ್ಲಿನ ಕೃಷಿಕರು ವಿಮುಖರಾಗುತ್ತಿದ್ದು, ಈ ಬಗ್ಗೆ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಮನವಿ ನೀಡಿದರೂ ತುರ್ತು ಸ್ಪಂದನೆ ಲಭ್ಯವಾಗಿಲ್ಲ. ಇದನ್ನು ಖಂಡಿಸಿರುವ ರೈತ ಸಮುದಾಯ ಎದೆಗುಂದದೆ ಸ್ವಂತ ಖರ್ಚಿನಲ್ಲಿ ಹೊಳೆ ದಂಡೆ ನಿರ್ಮಿಸಲು ಮುಂದಾಗಿ ಮಾದರಿಯಾಗಿದ್ದಾರೆ.