ಸುಬ್ರಹ್ಮಣ್ಯ: ಬಿಳಿನೆಲೆ ಗ್ರಾಮದ ಕೈಕಂಬ ಸಮೀಪದ ಕಳಿಗೆ ಎಂಬಲ್ಲಿ ಕೃಷಿ ತೋಟಕ್ಕೆ ಶುಕ್ರವಾರ ರಾತ್ರಿ ಮೂರು ಕಾಡಾನೆಗಳು ದಾಳಿ ನಡೆಸಿವೆ.
ಧರ್ಮಪ್ಪ ಗೌಡ, ಆನಂದ ಗೌಡ, ಹಾಗೂ ಚಿದಾನಂದ ಗೌಡ ಎಂಬುವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಲವತ್ತಾದ ತೆಂಗಿನ ಮರ, ಅಡಿಕೆ ಮರಗಳು ಹಾಗೂ ಬಾಳೆಗಿಡಗಳನ್ನು ನಾಶಗೊಳಿಸಿವೆ. ಆನೆಗಳ ತುಳಿತದಿಂದ ನೀರಾವರಿ ಪೈಪ್‌ಲೈನ್, ಸ್ಪ್ರಿಂಕ್ಲರ್ ಧ್ವಂಸಗೊಂಡಿದೆ.
ಮಾಹಿತಿ ಪಡೆದ ಅರಣ್ಯ ಇಲಾಖೆಯ ಕೊಂಬಾರು ರಾತ್ರಿ ಬೀಟ್‌ನ ಅರಣ್ಯ ರಕ್ಷಕ ದಿನೇಶ್, ಅರಣ್ಯ ವೀಕ್ಷಕ ಕಾರ್ತಿಕ್ ಸ್ಥಳಕ್ಕೆ ಆಗಮಿಸಿ ಮಧ್ಯರಾತ್ರಿ ತನಕ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿಗೆ ಅಟ್ಟಿದರು.