ಸಂಸ್ಥೆಯನ್ನು ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ

ತೋಕೂರು 31ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಕವಿತಾ ಸನೀಲ್, ಭುವನಾಭಿರಾಮ ಉಡುಪ, ಜಗದೀಶ್ ಕೆ., ದಿನೇಶ್ ಎಲ್.ಬಂಗೇರ, ಹಿಮಕರ್ ಸುವರ್ಣ ಕಲ್ಲಾಡಿ, ದಿವಾಕರ ಕರ್ಕೇರ, ವಿಶ್ವನಾಥ್, ಸದಾಶಿವ ಕುಂದರ್, ಅರ್ಪಿತಾ ಪ್ರಶಾಂತ್ ಶೆಟ್ಟಿ, ಗುರುರಾಜ್ ಪೂಜಾರಿ ಇದ್ದರು.
ತೋಕೂರು 31ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಕವಿತಾ ಸನೀಲ್, ಭುವನಾಭಿರಾಮ ಉಡುಪ, ಜಗದೀಶ್ ಕೆ., ದಿನೇಶ್ ಎಲ್.ಬಂಗೇರ, ಹಿಮಕರ್ ಸುವರ್ಣ ಕಲ್ಲಾಡಿ, ದಿವಾಕರ ಕರ್ಕೇರ, ವಿಶ್ವನಾಥ್, ಸದಾಶಿವ ಕುಂದರ್, ಅರ್ಪಿತಾ ಪ್ರಶಾಂತ್ ಶೆಟ್ಟಿ, ಗುರುರಾಜ್ ಪೂಜಾರಿ ಇದ್ದರು.
Published on
ಕಿನ್ನಿಗೋಳಿ: ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭ ಆದರೆ ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಕಳೆದ 31 ವರ್ಷದಿಂದ  ನಿರಂತರ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವುದು ಅಭಿನಂದನೀಯ ಎಂದು ಮಾಜಿ ಮೇಯರ್ ಕವಿತಾ ಸನೀಲ್ ಹೇಳಿದರು.
 ಫೇಮಸ್ ಯೂತ್ ಕ್ಲಬ್ ಮತ್ತು ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲ ತೋಕೂರು 31ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುಗಪುರುಷದ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಮೈಭಾರತ್‌ನ ಜಿಲ್ಲಾ ಯುವ ಅಧಿಕಾರಿ ಜಗದೀಶ್ ಕೆ., ಬೈಕಂಪಾಡಿ ರೋಟರಿ ಕ್ಲಬ್ ಅಧ್ಯಕ್ಷ ದಿನೇಶ್ ಎಲ್.ಬಂಗೇರ, ಹಳೆಯಂಗಡಿ ಪಿ.ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಮಕರ್ ಸುವರ್ಣ ಕಲ್ಲಾಡಿ, ದಿವಾಕರ ಕರ್ಕೇರ, ಎಚ್.ಪಿ.ಸಿ.ಎಲ್‌ನ ವಿಶ್ವನಾಥ್, ಓಂಕಾರೇಶ್ವರೀ ಮಂದಿರದ ಅಧ್ಯಕ್ಷ ಸದಾಶಿವ ಕುಂದರ್, ಅರ್ಪಿತಾ ಪ್ರಶಾಂತ್ ಶೆಟ್ಟಿ, ಸಂಸ್ಥೆ ಗೌರಾವಾಧ್ಯಕ್ಷ ಗುರುರಾಜ್ ಪೂಜಾರಿ, ಅಧ್ಯಕ್ಷ ಸಂಪತ್ ಶೆಟ್ಟಿ ತೋಕೂರುಗುತ್ತು, ಕಾರ್ಯದರ್ಶಿ ಮೋಹನ್ ದೇವಾಡಿಗ ಕೋಶಾಧಿಕಾರಿ ನವೀನ್ ಚಂದ್ರ, ಮಹಿಳಾ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ಮಹಿಳಾ ಕಾರುಅದರ್ಶಿ ಕುಸುಮ ಎಚ್.ಕೋಟ್ಯಾನ್, ಕೋಶಾಧಿಕಾರಿ ಇಂದಿರಾ ಸಂಜೀವ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆ ಅಧ್ಯಕ್ಷ ಸಂಪತ್ ಶೆಟ್ಟಿ ಸ್ವಾಗತಿಸಿದರು. ಮಹಮದ್ ಶರೀಪ್ ವಂದಿಸಿದರು. ಬಾಸ್ಕರ್ ಅಮೀನ್ ನಿರೂಪಿಸಿದರು. 

 ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

 ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಜೈಕೃಷ್ಣ ಕೋಟ್ಯಾನ್ ಹಳೆಯಂಗಡಿ, ವಿವಿಧ ಕ್ಷೇತ್ರದ ಸಾಧಕರಾದ ಕೃತಿ ರವಿಕಿರಣ್, ಮೋಹನ್ ಸುವರ್ಣ ಇಂದಿರಾ ನಗರ, ನಾರಾಯಣ, ಕೃತಿಕಾ ಎಸ್.ಕರ್ಕೇರ, ದಿನೇಶ್ ಕುಲಾಲ್, ತೃಷಾ ಎಚ್.ಕೆ., ತನ್ವಿ ಕೃತಿ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಧನಂಜಯ ಶೆಟ್ಟಿಗಾರ್, ಹರಿಪ್ರಸಾದ್ ಜೆ.ಶೆಟ್ಟಿ ತೋಕೂರುಗುತ್ತು, ಸದಾಶಿವ ಕುಂದರ್, ಪ್ರೇಮಲತಾ ಯೋಗೀಶ್ ಅವರನ್ನು ಗೌರವಿಸಲಾಯಿತು. ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net