ಆರಂಭದಲ್ಲಿ 'ಸ್ಮರಣಯೊಂದೇ ಸಾಲದೆ ಗೋವಿಂದನ' ಎಂಬ ಭಕ್ತಿಗೀತೆಯ ಮೂಲಕ ಕೃಷ್ಣನ ಸನ್ನಿಧಿಯಲ್ಲಿ ಪ್ರೇಕ್ಷಕರ ಮನದಲ್ಲಿ ದೈವಭಕ್ತಿ ಜಾಗೃತಗೊಳಿಸಿದರು. ನಂತರ ದ್ವಿಜಾವಂತಿ ರಾಗದಲ್ಲಿ 'ಚೇತಶ್ರೀ ಬಾಲಕೃಷ್ಣಂ ಭಜೇ' ಎಂಬ ಗೀತೆಯ ಮೂಲಕ ಕೃಷ್ಣನ ಬಾಲಲೀಲೆಗಳನ್ನು ಪ್ರಸ್ತುತಪಡಿಸಿದರು. ಸಾವೇರಿ ರಾಗದಲ್ಲಿ ಕೃಷ್ಣನ ಕುರಿತ ತಮಿಳು ಕೃತಿ ಪ್ರಸ್ತುತಪಡಿಸಿದರು. ವಿವಿಧ ರೀತಿಯಲ್ಲಿ ಆರೋಹ-ಅವರೋಹದ ಮೂಲಕ ತಮ್ಮ ಸಂಗೀತ ಪಾಂಡಿತ್ಯ ಪ್ರದರ್ಶಿಸಿ, ಸಂಗೀತ ರಸಿಕರ ಮನ ಗೆದ್ದರು.