ರಾಜಾಂಗಣದಲ್ಲಿ 'ಕಾಳೆ' ಸಂಗೀತ ದರ್ಬಾರ್

ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಎರಡನೇ ದಿನವಾದ ಸೋಮವಾರ (ಜ.19) ರಾತ್ರಿಯ ದರ್ಬಾರ್ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರೋಹ-ಅವರೋಹದ ಗಾಯನದ ಮೂಲಕ ಅಭಂಗ ವಾರಿ ಖ್ಯಾತಿಯ ಸಂಗೀತ ಮಾಂತ್ರಿಕ, ಕಲಾವಿದ ಮಹೇಶ್ ಕಾಳೆ ಸಂಗೀತ ಕಛೇರಿ ನಡೆಸಿದರು.
ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಎರಡನೇ ದಿನವಾದ ಸೋಮವಾರ (ಜ.19) ರಾತ್ರಿಯ ದರ್ಬಾರ್ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರೋಹ-ಅವರೋಹದ ಗಾಯನದ ಮೂಲಕ ಅಭಂಗ ವಾರಿ ಖ್ಯಾತಿಯ ಸಂಗೀತ ಮಾಂತ್ರಿಕ, ಕಲಾವಿದ ಮಹೇಶ್ ಕಾಳೆ ಸಂಗೀತ ಕಛೇರಿ ನಡೆಸಿದರು.
Published on

** ಪ್ರೇಕ್ಷಕರನ್ನು ಭಕ್ತಿಲೋಕದಲ್ಲಿ ತೇಲಿಸಿದ ಮಹೇಶ

** ಆರೋಹ-ಅವರೋಹದಿ ಪರಾಕಾಷ್ಠೆ ಪ್ರವೇಶ

ಉಡುಪಿ: ಸಂಗೀತಪ್ರಿಯನೂ ಆದ ಉಡುಪಿಯ ಶ್ರೀಕೃಷ್ಣನ ಸನ್ನಿಧಿಯ ರಾಜಾಂಗಣದಲ್ಲಿ ಅಂತಾರಾಷ್ಟ್ರೀಯ ಹಾಗೂ ಅಭಂಗ ವಾರಿ ಖ್ಯಾತಿಯ ಸಂಗೀತ ಮಾಂತ್ರಿಕ, ಕಲಾವಿದ ಮಹೇಶ್ ಕಾಳೆ ಅವರ 'ಸಂಗೀತ ದರ್ಬಾರ್' ಕಿಕ್ಕಿರಿದು ಸೇರಿದ್ದ ಸಾವಿರಾರು ಪೇಕ್ಷಕರನ್ನು ಭಕ್ತಿ ಲೋಕದಲ್ಲಿ ತೇಲಿಸಿತು.
ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಎರಡನೇ ದಿನವಾದ ಸೋಮವಾರ (ಜ.19) ರಾತ್ರಿಯ ದರ್ಬಾರ್ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರೋಹ-ಅವರೋಹದ ಗಾಯನದ ಮೂಲಕ ಜನರು ಸಂಗೀತ ಪರಾಕಾಷ್ಠೆ ಪ್ರವೇಶಿಸುವಂತೆ ಕಛೇರಿ ನಡೆಸಿದರು.

ಆರಂಭದಲ್ಲೇ ರೋಮಾಂಚನ

ಯಾಕುಂದೇಂದು ತುಷಾರ ಹಾರಧವಳ ಎಂಬ ಶ್ಲೋಕವನ್ನು ಆರಂಭಿಸುತ್ತ, ಏರುಧನಿಯಲ್ಲಿ ಹಾಡುತ್ತಿದ್ದಂತೆ ಪ್ರೇಕ್ಷಕರ ದೇಹದಲ್ಲಿ ರೋಮಾಂಚನ ಉಂಟಾಯಿತು. ಹರಿಭಜನ ದೀನ, ಕೌನ್ ಬಿಗಾಡ ಕರೇ ನರ್ ತೇರೋ ಜಾನಕಿನಾಥ ಸಹಾರ ಕರೇ,  ಪಾಯೋಜಿ ಮೈನೆ ರಾಮರತನ್ ಧನ್ ಪಾಯೋ, ಶ್ರೀರಾಮ್ ಜೈರಾಮ್ ಜೈಜೈ  ರಾಮ್, ರಾಮನಾಮ್ ರಸ್ ಪೀನಿ ಚದರಿಯಾ, ಕಬೀರ ದಾಸರ ಭಜನೆ ಹಾಗೂ ಕಾನಡಾ ರಾಜಾ ಪಂಡರೀಚಾ ಸೇರಿದಂತೆ ವಿವಿಧ ಮರಾಠಿ ಭಜನೆಯ ಮೂಲಕ ಮಂತ್ರಮುಗ್ಧರನ್ನಾಗಿಸಿದರು. ಪ್ರೇಕ್ಷಕರೂ ಸಹ ಕಾಳೆ ಅವರೊಂದಿಗೆ ಚಪ್ಪಾಳೆ ತಟ್ಟುತ್ತ ಹಾಡುವ ಮೂಲಕ ದೇವರ ನಾಮ ಸಂಕೀರ್ತನೆಗೆ ಸಾಥ್ ನೀಡಿದರು. 

ಪುರಂದರ ದಾಸರ ಹಾಡು

ಆಡಿಸಿದಳು ಯಶೋದೆ ಜಗದೋದ್ಧಾರನ ಎಂಬ ಪುರಂದರ ದಾಸರ ಹಾಡನ್ನು ಮನೋಜ್ಞವಾಗಿ ಹಾಡುವ ಮೂಲಕ ಶ್ರೀಕೃಷ್ಣನ ಸನ್ನಿಧಿಯಲ್ಲಿ ಜಮಾಯಿಸಿದ್ದ ಪ್ರೇಕ್ಷಕರಲ್ಲಿ ಕೃಷ್ಣಭಕ್ತಿ ಜಾಗೃತಗೊಳಿಸಿದರು. ನನಗೆ ಕನ್ನಡ ಭಾಷೆ ಅರ್ಥ ಆಗುವುದಿಲ್ಲ. ಆದರೆ, ಪುರಂದರ ದಾಸರು ಯಶೋದೆ ಹಾಗೂ ಕೃಷ್ಣನ ಪ್ರೀತಿಯನ್ನು ವಿವರಿಸಿರುವುದು ಅರ್ಥ ಆಗುತ್ತದೆ ಎಂದು ಮಹೇಶ್ ಕಾಳೆ ತಿಳಿಸಿದರು.
ಮಹೇಶ ಕಾಳೆ ಅವರಿಗೆ ವಯೋಲಿನ್ ನಲ್ಲಿ ರಂಗ ಪೈ, ತಬಲಾ- ಉದಯ ಕುಲಕರ್ಣಿ, ಮೃದಂಗ- ಗುರುಮೂರ್ತಿ ವೈದ್ಯ, ಹಾರ್ಮೋನಿಯಂ ರವೀಂದ್ರ ಕಾತೋಟಿ, ಮಂಜೀರಾ- ವೆಂಕಟೇಶ್ ಪುರೋಹಿತ, ತಾನ್ಪುರ- ಅರುಂಧತಿ ವಸಿಷ್ಠ ಹಾಗೂ ಅಂಕುರ್ ಚಂಡೆ ಸಹಕರಿಸಿದರು.
ಶೀರೂರು ಮಠದ ಪರವಾಗಿ ಎಂ.ಎಲ್. ಸಾಮಗ ಅವರು ಕಲಾವಿದರನ್ನು ಸ್ವಾಗತಿಸಿ, ಪರಿಚಯಿಸಿದರು. ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net