ಉಡುಪಿ: ಕನ್ನಡ ಭಾಷೆಯಲ್ಲಿ ಗ್ರಂಥ ಸಂಪಾದನೆ, ಸಂಶೋಧನಾ ಕಾರ್ಯವನ್ನು ದಶಕಗಳ ಹಿಂದೆ ತಾತ್ವಿಕ ಶುದ್ಧತೆ, ಬದ್ಧತೆಯಿಂದ ಮಾಡಲಾಗುತ್ತಿತ್ತು. ಹೀಗಾಗಿ ದಾಸಸಾಹಿತ್ಯದ ಜನಪ್ರಿಯ ಪಠ್ಯ ಹಾಗೂ ಅಧ್ಯಯನಯುಕ್ತ ಸಂಶೋಧನಾ ಪಠ್ಯಗಳೆಂಬ ಎರಡು ರೂಪಗಳು ಲಭಿಸುತ್ತಿತ್ತು. ಆದರೀಗ ಈ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರು ಕಡಿಮೆಯಾಗುತ್ತಿದ್ದು ಅವರಿಗೆ ಉದ್ಯೋಗಾವಕಾಶವೂ ಸರಿಯಾಗಿ ಲಭಿಸುತ್ತಿಲ್ಲ ಎಂದು ಹಿರಿಯ ಸಂಶೋಧಕ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ ವಿಷಾದ ವ್ಯಕ್ತಪಡಿಸಿದರು.