ಉಡುಪಿಯ ಅಂಶು ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿರೀಶ್ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಎಚ್.ಡುಂಡಿರಾಜ್, ಸು.ಜಿ. ಕುರ್ಯ, ಯು.ವಿಶ್ವನಾಥ್ ಶೆಣೈ, ಪ್ರೊ. ಶಂಕರ್, ರವಿರಾಜ್ ಎಚ್.ಪಿ., ರಾಜೇಶ್ ಭಟ್ ಇದ್ದರು.
Published on:
Copied
Follow Us
* ಕವಿ ಎಚ್. ಡುಂಡಿರಾಜ್ ಅಭಿಪ್ರಾಯ
* ಉಡುಪಿಯಲ್ಲಿ ಹೊಸ ಕವಿತೆಗಳ ಪ್ರಸ್ತುತಿ
ಉಡುಪಿ: ಚಿಕ್ಕ ಕವನಗಳಲ್ಲೂ ಅಪಾರ ಅರ್ಥವಿರುತ್ತದೆ. ಹನಿಗವನವಾದರೂ ಸಹ ಅದು ಜೀವನದ ಮೌಲ್ಯ ಸಾರುತ್ತದೆ. ಹೀಗಾಗಿ ನವ್ಯ ಕವನಗಳಲ್ಲೂ ಜೀವನ ಸಾರ ಅಡಗಿದೆ ಎಂದು ಹನಿ ಕವಿತೆಗಳ ರಾಜ ಖ್ಯಾತಿಯ ಕವಿ ಎಚ್. ಡುಂಡಿರಾಜ್ ಅಭಿಪ್ರಾಯಪಟ್ಟರು.
ಉಡುಪಿಯ ಬುಡ್ನಾರುನಲ್ಲಿರುವ ಅಂಶು ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಸಹಕಾರದಲ್ಲಿ ಆಯೋಜಿಸಿದ್ದ ಎಚ್. ಡುಂಡಿರಾಜ್ ಅವರ ಹೊಸ ಕವಿತೆಗಳು ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ಗಂಟೆಗೂ ಅಧಿಕ ಕಾಲ ಡುಂಡಿರಾಜ್ ಅವರು ತಮ್ಮ ಹೊಸ ಹನಿಗವನ, ಹೈಕುಗಳ ಮೂಲಕ ಪ್ರೇಕ್ಷಕರ ಮನ ಮುದಗೊಳಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸು.ಜಿ. ಕುರ್ಯ, ಸ್ವರಚಿತ ಹನಿಗವನ ಹೇಳುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ನಗರಸಭಾ ನಿಕಟಪೂರ್ವ ಸದಸ್ಯ ಗಿರೀಶ್ ಅಂಚನ್ ಅವರನ್ನು ಸನ್ಮಾನಿಸಲಾಯಿತು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಯು.ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜಿನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್, ನಾರಾಯಣ ಮಡಿ, ಭುವನಪ್ರಸಾದ್ ಹೆಗಡೆ ಇತರರಿದ್ದರು.
ಸಂಧ್ಯಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಜನಾರ್ದನ್ ವಂದಿಸಿದರು.