ಉಡುಪಿಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ವತಿಯಿಂದ ಆಯೋಜಿಸಿದ್ದ ವರಕವಿ ದ.ರಾ. ಬೇಂದ್ರೆ ಜನ್ಮದಿನಾಚರಣೆಯಲ್ಲಿ ಶಿಕ್ಷಕಿ ಸಹನಾ ಮಾತನಾಡಿದರು. ಶ್ರೀನಿವಾಸ್ ರಾವ್ ಕೆ., ಉಮೇಶ್ ಇದ್ದರು.
Published on:
Copied
Follow Us
* ಸಗ್ರಿ ಶಾಲೆಯ ಶಿಕ್ಷಕಿ ಸಹನಾ ಅಭಿಪ್ರಾಯ
* ಸಮಾನ ಮನಸ್ಕ ವೇದಿಕೆಯಿಂದ ಜನ್ಮದಿನಾಚರಣೆ
ಉಡುಪಿ: ಇಂದಿನ ಆಧುನಿಕ ಭರಾಟೆ ಹಾಗೂ ಯಾಂತ್ರೀಕೃತ ಜೀವನದ ಒತ್ತಡಗಳ ನಡುವೆ ಶ್ರೇಷ್ಠ ಸಾಹಿತಿಗಳು ರಚಿಸಿರುವ ಕೃತಿಗಳ ಅಧ್ಯಯನ ಕಾಣದಾಗಿದೆ. ಕಡುಬಡತನದಲ್ಲಿ ಬೆಳೆದ ದ.ರಾ. ಬೇಂದ್ರೆ ಅವರು ಸಾಹಿತ್ಯದ ಉತ್ತುಂಗ ತಲುಪಿದವರು. ಬದುಕಿನಲ್ಲಿ ಕಂಡ ದು:ಖ, ನೋವು, ನಿರಾಶೆಗಳನ್ನೇ ಕಾವ್ಯವಾಗಿಸಿ ಜನರ ಬದುಕನ್ನು ಅನಾವರಣಗೊಳಿಸಿದ್ದಾರೆ. ಯುವಸಮುದಾಯಕ್ಕೆ ಓದುವ ಅಭಿರುಚಿಯೇ ಇಲ್ಲದಾಗಿದೆ. ವಿದ್ಯಾರ್ಥಿಗಳು ಬೇಂದ್ರೆ ಅವರ ಸಾಹಿತ್ಯ ಓದಬೇಕು. ಅದರಿಂದ ಜೀವನದ ಜ್ಞಾನ ಲಭಿಸಲಿದೆ ಎಂದು ಶಿಕ್ಷಕಿ ಸಹನಾ ಅಭಿಪ್ರಾಯಪಟ್ಟರು.
ಉಡುಪಿಯ ಸಗ್ರಿ ವಾರ್ಡ್ನಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ವತಿಯಿಂದ ಶನಿವಾರ (ಜ.31) ಆಯೋಜಿಸಿದ್ದ ವರಕವಿ ದ.ರಾ. ಬೇಂದ್ರೆ ಅವರ 130ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ಸಾಹಿತ್ಯದಲ್ಲಿದೆ ಶ್ರೀಮಂತಿಕೆ
ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ಮಾತನಾಡಿ, ಬೇಂದ್ರೆಯವರ ಬದುಕೇ ಸಾಹಿತ್ಯವಾಗಿದೆ. ಅವರ ಬದುಕಿನಲ್ಲಿ ಬಡತನವಿದ್ದರೂ ರಚಿಸಿದ್ದ ಸಾಹಿತ್ಯದಲ್ಲಿ ಜ್ಞಾನ ಶ್ರೀಮಂತಿಕೆ ಇದೆ. ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠದಂತಹ ಅತ್ಯುನ್ನತ ಪ್ರಶಸ್ತಿ ತಂದುಕೊಟ್ಟ ಶ್ರೇಷ್ಠರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಂದೂ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದರು.