ಖ್ಯಾತ ಛಾಯಾಗ್ರಾಹಕ ಆಸ್ಟ್ರೋಗೆ ಅಮೆರಿಕದ ಪ್ರಶಸ್ತಿ

ಅಮೆರಿಕದ ಪ್ರತಿಷ್ಠಿತ 'ಫೋಟೋಗ್ರಾಫಿಕ್​ ಸೊಸೈಟಿ ಆಫ್​​ ಅಮೆರಿಕ' ಆಯೋಜಿಸಿದ್ದ ಇಂಟರ್​ಕ್ಲಬ್​ ಛಾಯಾಚಿತ್ರ ಸ್ಪರ್ಧೆಯಲ್ಲಿ ಎರಡು ಪ್ರಶಸ್ತಿ ಗಳಿಸಿದ ಉಡುಪಿಯ ಖ್ಯಾತ ಛಾಯಾಗ್ರಾಹಕ ಆಸ್ಟ್ರೋ ಮೋಹನ್​.
ಅಮೆರಿಕದ ಪ್ರತಿಷ್ಠಿತ 'ಫೋಟೋಗ್ರಾಫಿಕ್​ ಸೊಸೈಟಿ ಆಫ್​​ ಅಮೆರಿಕ' ಆಯೋಜಿಸಿದ್ದ ಇಂಟರ್​ಕ್ಲಬ್​ ಛಾಯಾಚಿತ್ರ ಸ್ಪರ್ಧೆಯಲ್ಲಿ ಎರಡು ಪ್ರಶಸ್ತಿ ಗಳಿಸಿದ ಉಡುಪಿಯ ಖ್ಯಾತ ಛಾಯಾಗ್ರಾಹಕ ಆಸ್ಟ್ರೋ ಮೋಹನ್​.
Published on

* ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೆ ಮಿಂಚಿದ ಮೋಹನ್​

ಉಡುಪಿ: ಉಡುಪಿಯ ಹಿರಿಯ ಫೋಟೋ ಪತ್ರಕರ್ತ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್​ ಅವರು ಅಮೆರಿಕದ ಪ್ರತಿಷ್ಠಿತ "ಫೋಟೋಗ್ರಾಫಿಕ್​ ಸೊಸೈಟಿ ಆಫ್​ ಅಮೆರಿಕ' ಆಯೋಜಿಸಿದ್ದ 2025-26ನೇ ಸಾಲಿನ ಇಂಟರ್​ಕ್ಲಬ್​ ಛಾಯಾಚಿತ್ರ ಸ್ಪರ್ಧೆಯ ಮೂರನೇ ಸುತ್ತಿನ ಎರಡು ವಿಭಾಗಗಳಲ್ಲಿ ಅಂತಾರಾಷ್ಟ್ರೀಯ ಗೌರವಕ್ಕೆ ಭಾಜನರಾಗಿದ್ದಾರೆ.
ಸ್ಪರ್ಧೆಯ ವರ್ಣಚಿತ್ರ ವಿಭಾಗದಲ್ಲಿ ಅವರ 'ಗೋಲ್ಡನ್​ ಚಾರ್ಜ್​' ಚಿತ್ರಕ್ಕೆ ಮೆರಿಟ್​ ಪ್ರಶಸ್ತಿ ಲಭಿಸಿದ್ದು, ಪ್ರವಾಸ ಛಾಯಾಚಿತ್ರ ವಿಭಾಗದಲ್ಲಿ 'ಬೆಂಕಿಯೇ ಪ್ರಾರ್ಥನೆಯಾದಾಗ' ಎಂಬ ಚಿತ್ರಕ್ಕೆ ಗೌರವಾನ್ವಿತ ವಿಶೇಷ ಉಲ್ಲೇಖ (ಹೊನರೇಬಲ್​ ಮೆನ್ಶನ್​) ಪ್ರಶಸ್ತಿ ಲಭಿಸಿದೆ.
'ಗೋಲ್ಡನ್​ ಚಾರ್ಜ್​' ಚಿತ್ರಕ್ಕೆ ಮೆರಿಟ್​ ಪ್ರಶಸ್ತಿ ಲಭಿಸಿರುವುದು.

ಆಸ್ಟ್ರೋ ಮೋಹನ್​ ಅವರ ಕ್ಯಾಮರಾದಲ್ಲಿ ಸೆರೆಯಾಗುವ ಚಿತ್ರಗಳು ಕೇವಲ ಕಲಾತ್ಮಕತೆಯ ಪ್ರತೀಕಗಳಲ್ಲ. ಅವು ಭಾರತೀಯ ಸಂಸ್ಕೃತಿಯ ಬೇರು, ಜನಜೀವನದ ನೈಜತೆ ಹಾಗೂ ಭಾವನಾತ್ಮಕ ಕ್ಷಣಗಳ ಆಳವನ್ನು ವಿಶ್ವದ ವೇದಿಕೆಯಲ್ಲಿ ಪ್ರತಿಧ್ವನಿಸುವಂತೆ ಮಾಡುವ ದೃಶ್ಯಕಾವ್ಯಗಳಾಗಿವೆ. ಅವರಿಗೆ ಲಭಿಸಿರುವ ಈ ಪ್ರಶಸ್ತಿಯು ಕನ್ನಡಿಗರ ಕೀರ್ತಿಯು ಜಾಗತಿಕ ಮಟ್ಟದಲ್ಲಿ ಬೆಳಗುವಂತಾಗಿದೆ.
'ಬೆಂಕಿಯೇ ಪ್ರಾರ್ಥನೆಯಾದಾಗ' ಚಿತ್ರಕ್ಕೆ ಹೊನರೇಬಲ್​ ಮೆನ್ಶನ್​ ಪ್ರಶಸ್ತಿ ಲಭಿಸಿರುವುದು.

"

ಛಾಯಾಚಿತ್ರವೆಂದರೆ ಕೇವಲ ದೃಶ್ಯ ದಾಖಲೆಯಲ್ಲ. ಅದು ಸಂಸ್ಕೃತಿಯ ಸ್ಪಂದನ, ಮಣ್ಣಿನ ಪರಿಮಳ. ಜೀವನದ ತೀವ್ರ ಕ್ಷಣಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸುವ ಶಕ್ತಿಯುತ ಭಾಷೆ. ಪ್ರಶಸ್ತಿಗೆ ಭಾಜನವಾದ ಚಿತ್ರದ ಪ್ರತಿ ಫ್ರೇಮ್​ ಒಂದೊಂದು ಕಥೆ ಹೇಳುತ್ತದೆ. ಸ್ಥಳೀಯ ಸಂಸ್ಕೃತಿ ಇದರ ಮೂಲ ಹಂದರವಾಗಿದೆ.

— ಆಸ್ಟ್ರೋ ಮೋಹನ್​. ಹಿರಿಯ ಫೋಟೋ ಪತ್ರಕರ್ತ, ಉಡುಪಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net