ಅಳವಿನ ಅಂಚಿನಲ್ಲಿ ಕುಟುಂಬ ವೈದ್ಯ ಪದ್ಧತಿ

 ರಾಷ್ಟ್ರೀಯ ವೈದ್ಯರ ದಿನ ಪ್ರಯುಕ್ತ ಮಂಗಳೂರು ದೇರೆಬೈಲ್‌ನ ಕುಟುಂಬ ವೈದ್ಯ ಡಾ.ಸುದೇಶ್ ಕೆದೇರೆಬೈಲ್, ಕೇರಳ ಪಯ್ಯನ್ನೂರಿನ ಸ್ತ್ರೀರೋಗ ತಜ್ಞೆ ಡಾ.ಸರಸ್ವತಿ ವೇಣುಗೋಪಾಲ್, ಯಲ್ಲಾಪುರ ಉನ್ನಚಗಿಯ ಕುಟುಂಬ ವೈದ್ಯ ಡಾ.ಎಂ.ಎಸ್.ಭಟ್ ಅವರನ್ನು ಸನ್ಮಾನಿಸಲಾಯಿತು. ಡಾ.ಎಂ.ಎಸ್.ಭಟ್ ಮಾರಿಗೋಲಿ, ನಿಟ್ಟೆ ವಿವಿ ಕುಲಾಧಿಪತಿ ಎನ್.ವಿಶಾಲ್ ಹೆಗ್ಡೆ ಇದ್ದರು.
ರಾಷ್ಟ್ರೀಯ ವೈದ್ಯರ ದಿನ ಪ್ರಯುಕ್ತ ಮಂಗಳೂರು ದೇರೆಬೈಲ್‌ನ ಕುಟುಂಬ ವೈದ್ಯ ಡಾ.ಸುದೇಶ್ ಕೆದೇರೆಬೈಲ್, ಕೇರಳ ಪಯ್ಯನ್ನೂರಿನ ಸ್ತ್ರೀರೋಗ ತಜ್ಞೆ ಡಾ.ಸರಸ್ವತಿ ವೇಣುಗೋಪಾಲ್, ಯಲ್ಲಾಪುರ ಉನ್ನಚಗಿಯ ಕುಟುಂಬ ವೈದ್ಯ ಡಾ.ಎಂ.ಎಸ್.ಭಟ್ ಅವರನ್ನು ಸನ್ಮಾನಿಸಲಾಯಿತು. ಡಾ.ಎಂ.ಎಸ್.ಭಟ್ ಮಾರಿಗೋಲಿ, ನಿಟ್ಟೆ ವಿವಿ ಕುಲಾಧಿಪತಿ ಎನ್.ವಿಶಾಲ್ ಹೆಗ್ಡೆ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ನಮ್ಮ ಕಾಲದಲ್ಲಿ ಎಂಬಿಬಿಎಸ್ ದೊಡ್ಡ ಪದವಿ ಆಗಿದ್ದು, ಎಲ್ಲಾ ಕಾಯಿಲೆಗಳನ್ನು ಕುಟುಂಬ ವೈದ್ಯರೇ ಪರೀಕ್ಷಿಸಿ ಸೂಕ್ತ ವೈದ್ಯರನ್ನು ಸೂಚಿಸಬೇಕಿದ್ದರೆ, ಪ್ರಸ್ತುತ ಈ ಕೆಲಸ ಗೂಗಲ್ ಮಾಡುತ್ತಿದೆ. ಕುಟುಂಬ ವೈದ್ಯ ಪದ್ಧತಿ ಅಳಿವಿನ ಅಂಚಿನಲ್ಲಿದೆ ಎಂದು ಯಲ್ಲಾಪುರ ಉಮ್ಮಚಗಿಯ ಕುಟುಂಬ ವೈದ್ಯ ಡಾ.ಎಂ.ಎಸ್.ಭಟ್ ಮಾರಿಗೋಲಿ ಖೇದ ವ್ಯಕ್ತಪಡಿಸಿದರು.
ನಿಟ್ಟೆ ವಿಶ್ವವಿದ್ಯಾಲಯ ಅಧೀನದ ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ, ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿ ಆಶ್ರಯದಲ್ಲಿ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಆವಿಷ್ಕಾರ್ ಸಭಾಂಗಣದಲ್ಲಿ ಮಂಗಳವಾರ ನಡೆದ ‘ರಾಷ್ಟ್ರೀಯ ವೈದ್ಯರ ದಿನ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಮಂಗಳೂರು ದೇರೆಬೈಲ್‌ನ ಕುಟುಂಬ ವೈದ್ಯ ಡಾ.ಸುದೇಶ್ ಕೆ.ದೇರೆಬೈಲ್, ಕೇರಳ ಪಯ್ಯನ್ನೂರಿನ ಸ್ತ್ರೀರೋಗ ತಜ್ಞೆ ಡಾ.ಸರಸ್ವತಿ ವೇಣುಗೋಪಾಲ್, ಯಲ್ಲಾಪುರ ಉಮ್ಮಚಗಿಯ ಕುಟುಂಬ ವೈದ್ಯ ಡಾ.ಎಂ.ಎಸ್.ಭಟ್ ಮಾರಿಗೋಲಿ ಅವರನ್ನು ಸನ್ಮಾನಿಸಲಾಯಿತು. ನಿಟ್ಟೆ ವಿವಿ ಕುಲಾಧಿಪತಿ ಎನ್.ವಿಶಾಲ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಸಹ ಕುಲಾಧಿಪತಿ ಡಾ.ಎಂ.ಶಾಂತಾರಾಮ್ ಶೆಟ್ಟಿ, ಕುಲಾಧಿಪತಿ ಡಾ.ಎಂ.ಎಸ್.ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಆಸ್ಪತ್ರೆ ಡೀನ್ ಡಾ.ಸಂದೀಪ್ ರೈ ಸ್ವಾಗತಿಸಿದರು. ಡಾ.ಸುರೇಶ್ ಭಟ್, ಡಾ.ಮೀನು ಮೋಹನ್, ಡಾ.ಪ್ರದೀಪ್ ಶೆಣೈ ಸನ್ಮಾನ ಪತ್ರ ವಾಚಿಸಿದರು. ವೈದ್ಯಕೀಯ ಅಧೀಕ್ಷಕಿ ಡಾ.ಸುಮತಲಾ ಆರ್.ಶೆಟ್ಟಿ ವಂದಿಸಿದರು ಡಾ.ಸಿದ್ದಾರ್ಥ್ ಶೆಟ್ಟಿ, ಡಾ.ನಿಶಾ ಎಸ್.ಶೆಟ್ಟಿ ನಿರೂಪಿಸಿದರು.

ಸನ್ಮಾನಿತರ ವೈದ್ಯರು 40ರಿಂದ 50 ವರ್ಷ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಯುವ ವೈದ್ಯರಿಗೆ ಮಾದರಿ. ಪ್ರಸ್ತುತ ದಿನಗಳಲ್ಲಿ ಜಗತ್ತು ವೈದ್ಯಕೀಯ ಸಹಿತ ಎಲ್ಲಾ ಕ್ಷೇತ್ರದಲ್ಲಿ ಬದಲಾವಣೆ ಕಾಣುತ್ತಿದೆ. ಎಐ ಯುಗದಲ್ಲಿದ್ದೇವೆ. ವೃತ್ತಿಪರ ವೈದ್ಯರು ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳುವ ಅವಶ್ಯಕತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net