ಕುಂಬಳೆಯಲ್ಲಿ ಮರ ಬಿದ್ದು ಮನೆಗಳಿಗೆ ಹಾನಿ

ಕೋಟೆಕ್ಕಾರ್‌ನಲ್ಲಿ ರಾಧಾಕೃಷ್ಣ ಪೂಜಾರಿ ಎಂಬುವರ ಹೆಂಚಿನ ಮನೆ ಮೇಲೆ ಬುಡ ಸಮೇತ ಮುರಿದು ಬಿದ್ದಿರುವ ತೆಂಗಿನ ಮರ.
ಕೋಟೆಕ್ಕಾರ್‌ನಲ್ಲಿ ರಾಧಾಕೃಷ್ಣ ಪೂಜಾರಿ ಎಂಬುವರ ಹೆಂಚಿನ ಮನೆ ಮೇಲೆ ಬುಡ ಸಮೇತ ಮುರಿದು ಬಿದ್ದಿರುವ ತೆಂಗಿನ ಮರ.
Published on
ಕುಂಬಳೆ: ಭಾರಿ ಗಾಳಿ-ಮಳೆಗೆ ವಿವಿಧೆಡೆ ವ್ಯಾಪಕ ಹಾನಿ ಉಂಟಾಗಿದೆ. ಕುಂಬಳೆ ಪಂಚಾಯಿತಿಯ 12ನೇ ವಾರ್ಡ್ ಕೋಟೆಕ್ಕಾರ್‌ನಲ್ಲಿ ರಾಧಾಕೃಷ್ಣ ಪೂಜಾರಿ ಎಂಬುವರ ಹೆಂಚಿನ ಮನೆ ಮೇಲೆ ತೆಂಗಿನ ಮರ ಬುಡ ಸಮೇತ ಮುರಿದು ಬಿದ್ದಿದೆ.
24ನೇ ವಾರ್ಡ್ ಶೇಡಿಕಾವಿನಲ್ಲಿ ಮುತ್ತುಕೋಯ ತಂಙಳ್ ಎಂಬುವರ ಹೆಂಚಿನ ಮನೆ ಮೇಲೆ ಸಮೀಪದ ಮರದ ರೆಂಬೆ ಮುರಿದು ಬಿದ್ದಿದೆ. ಮನೆಗಳಿಗೆ ಅಪಾರ ಹಾನಿಯಾಗಿದ್ದು, ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

ಕಿನಾನೂರು ಕರಿಂದಳ ಪಂಚಾಯಿತಿಯ ನಾಂದಿಯಡ್ಕದಲ್ಲಿ ಜಾನಕಿ ಎಂಬುವರ ಹೆಂಚಿನ ಮನೆ ಮೇಲೆ ಮರ ಬಿದ್ದಿದ್ದು ಮನೆಯಲ್ಲಿದ್ದ ಅವರ ತಾಯಿ ಕೆ.ಮಾಣಿಕ್ಕ(90) ಗಾಯಗೊಂಡಿದ್ದಾರೆ. ಇತರರು ಅಪಾಯದಿಂದ ಪಾರಾಗಿದ್ದಾರೆ.
ಕಾಞಂಗಾಡ್ ಸೌತ್ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಮೇಲ್ಛಾವಣಿಯ ಶೀಟ್‌ಗಳು ಬಿರುಗಾಳಿಗೆ ಹಾರಿ ಹೋಗಿವೆ. ಶಾಲೆ ಸಮೀಪದ ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಭಾರಿ ಗಾಳಿಗೆ ರಬ್ಬರ್ ಸಹಿತ ಹಲವು ಮರಗಳು ಮುರಿದು ಬಿದ್ದಿದ್ದು ವ್ಯಾಪಕ ನಷ್ಟ ಉಂಟಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net