ಮರ ಬಿದ್ದು ಸಂಚಾರ ಬಂದ್

ಗಾಳಿ, ಮಳೆಗೆ ಕಮಲ ರಸ್ತೆಯಲ್ಲಿ ಶ್ರೀದೇವಿ ಭಜನಾ ಮಂದಿರದ ಹತ್ತಿರ ಬೃಹತ್ ಮರ ಮುರಿದು ಬಿದ್ದಿರುವುದು.
ಗಾಳಿ, ಮಳೆಗೆ ಕಮಲ ರಸ್ತೆಯಲ್ಲಿ ಶ್ರೀದೇವಿ ಭಜನಾ ಮಂದಿರದ ಹತ್ತಿರ ಬೃಹತ್ ಮರ ಮುರಿದು ಬಿದ್ದಿರುವುದು.
Published on
ಬಂಟ್ವಾಳ: ಶುಕ್ರವಾರ ಸಂಜೆ ಬೀಸಿದ ಗಾಳಿ, ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ ರಸ್ತೆಯಲ್ಲಿ ಶ್ರೀದೇವಿ ಭಜನಾ ಮಂದಿರದ ಹತ್ತಿರ ಬೃಹತ್ ಮರವೊಂದು ವಿದ್ಯುತ್ ಟ್ರಾನ್ಸ್‌ಫಾರ್ಮಾರ್ ಕಂಬದ ಮೇಲೆ ಬಿದ್ದಿದೆ.
ವಿದ್ಯುತ್ ತಂತಿಗಳು ತುಂಡಾಗಿ ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್ ಆಗಿದೆ. ರಾತ್ರಿ ಶ್ರೀಮಠದ ಕಾರ್ಯದರ್ಶಿ ಶಿವಪ್ರಸಾದರ ನೇತೃತ್ವದಲ್ಲಿ ಸ್ಥಳೀಯರು ಮರ ಕಡಿದು ರಸ್ತೆ ಸಂಚಾರಕ್ಕೆ ತೆರವುಗೊಳಿಸಲು ಶ್ರಮಿಸಿದರು. ವಿದ್ಯುತ್ ಪರಿವರ್ತಕ್ಕೆ ಹಾನಿಯಾಗಿದ್ದು ಪೆರಾಜೆ ಪರಿಸರಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net