ನಂಬಿಕೆ, ಭಕ್ತಿಯೇ ಧರ್ಮದ ಅಡಿಪಾಯ

 ಶರವೂರು ದುರ್ಗಾಪರಮೇಶ್ವರಿ ದೇವಳದ ಬ್ರಹ್ಮಕಲಶ ಧಾರ್ಮಿಕ ಸಭೆಯಲ್ಲಿ ಎಡನೀರು ಶ್ರೀ ಆಶೀರ್ವಚನ ನೀಡಿದರು.ಪ್ರಮುಖರಾದ ಅರುಣ್ ಶ್ಯಾಮ್, ವಿನಯಕುಮಾರ್ ಸೊರಕೆ, ಡಾ.ಶ್ಯಾಮ್ ಭಟ್, ಜಗನ್ನಾಥ ರೈ, ಮಹೇಶ್ ಕಜೆ ಮತ್ತಿತರರಿದ್ದರು.
ಶರವೂರು ದುರ್ಗಾಪರಮೇಶ್ವರಿ ದೇವಳದ ಬ್ರಹ್ಮಕಲಶ ಧಾರ್ಮಿಕ ಸಭೆಯಲ್ಲಿ ಎಡನೀರು ಶ್ರೀ ಆಶೀರ್ವಚನ ನೀಡಿದರು.ಪ್ರಮುಖರಾದ ಅರುಣ್ ಶ್ಯಾಮ್, ವಿನಯಕುಮಾರ್ ಸೊರಕೆ, ಡಾ.ಶ್ಯಾಮ್ ಭಟ್, ಜಗನ್ನಾಥ ರೈ, ಮಹೇಶ್ ಕಜೆ ಮತ್ತಿತರರಿದ್ದರು.
Published on
ಕಡಬ: ಮನುಷ್ಯರಿಗೆ ದೇವರ ಮೇಲೆ ನಂಬಿಕೆ, ಶ್ರದ್ಧೆ, ಭಕ್ತಿ ಇದ್ದರೆ ಮಾತ್ರ ಧರ್ಮ ಉಜ್ವಲವಾಗಿ ಬೆಳಗಲು ಸಾಧ್ಯ. ಸಮಯದಲ್ಲಿ ಸಾಮರಸ್ಯ ಕಾಪಾಡಿಕೊಂಡು ಬರಲು ದೇವಸ್ಥಾನ ಅತಿ ಅಗತ್ಯ. ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ಬಹಳ ಸುಂದರವಾಗಿ ನಿರ್ಮಾಣವಾಗಿದೆ. ಭಕ್ತರ ಸಹಕಾರ, ಶ್ರೀ ದೇವಿಯ ಅನುಗ್ರಹದಿಂದ ಮಹಾಕಾರ್ಯ ಸಾಧ್ಯವಾಗಿದೆ ಎಂದು ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನಮ್‌ನ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದರು ಹೇಳಿದರು.
ಶರವೂರು ದುರ್ಗಾಪರಮೇಶ್ವರಿ ದೇವಳದ ಬ್ರಹ್ಮಕಲಶದ ಅಂಗವಾಗಿ ಶನಿವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರಾಜೇಶ್ ರೈ ಉದ್ಘಾಟಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ ಅಧ್ಯಕ್ಷತೆ ವಹಿಸಿದ್ದರು. ವಾಸ್ತು ಶಿಲ್ಪಿ ಡಾ.ಪ್ರಸಾದ್ ಮುನಿಯಂಗಳ ಉಪನ್ಯಾಸ ನೀಡಿದರು.
ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರುಣ್ ಶ್ಯಾಮ್, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಶ್ಯಾಮ್ ಭಟ್, ಚಿಕ್ಕಬಳ್ಳಾಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ ರೈ, ಜಾರಿ ನಿರ್ದೇಶನಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಮಹೇಶ್ ಕಜೆ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಬೆಂಗಳೂರು ಉದ್ಯಮಿ ಆರ್.ಕೆ.ಭಟ್, ಸಾಹಿತಿ ಚಂದ್ರಶೇಖರ ಕುಂಬಾರ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಬಡ್ಡಿ ಆಟಗಾರರಾದ ಪ್ರಶಾಂತ ರೈ, ರೋಹಿತ್ ಮಾರ್ಲ, ಪ್ರಮುಖರಾದ ದೇವಿಪ್ರಸಾದ್ ಕನತ್ತೂರ್, ಮಾಧವ ಸರಳಾಯ, ಶ್ರೀಧರ ಗೌಡ, ಶ್ರೀಧರ ರೈ, ಶಾಂತಾರಾಮ ಕುಂತೂರು ಗುತ್ತು, ಮೋಹನ ಎಸ್, ಕುಂಞ ಮುಗೇರ, ಶ್ರೀಕೃಷ್ಣ ಎಂ.ಆರ್., ವಸಂತ ಗೌಡ ಉಪಸ್ಥಿತರಿದ್ದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಹೇಮಂತ್ ರೈ ಮನವಳಿಕೆಗುತ್ತು ಸ್ವಾಗತಿಸಿದರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ ವಂದಿಸಿದರು. ಗಣರಾಜ್ ಕುಂಬ್ಳೆ, ಗುರುಕಿರಣ್ ಶೆಟ್ಟಿ, ರೂಪಾ ಜೆ.ರೈ ನಿರೂಪಿಸಿದರು. ಬೆಳಗ್ಗೆ ಭಜನಾ ಸೇವೆ, ವಿವಿಧ ವೈದಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮನುಷ್ಯ ರಾಜನಂತೆ ಬದುಕಬೇಕು, ಸನ್ಯಾಸಿಯಂತೆ ಆಲೋಚನೆ ಮಾಡಬೇಕು. ದೇವರು ಓಂಕಾರ ರೂಪದಲ್ಲಿ ನೆಲೆಸಿದ್ದಾರೆ. ಓಂಕಾರ ಜಪಿಸಿದರೆ ಅಹಂಕಾರ ನಿವಾರಣೆಯಾಗುತ್ತದೆ. ಜಗತ್ತಿನಲ್ಲಿ ನಡೆಯುವ ಸಂಘರ್ಷಕ್ಕೆ ಸಂಧಾನ ಪರಿಹಾರ ಹೊರತು, ಸಂಘರ್ಷ ಅಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net