ರೈತರಿಗೆ ನೇರ ಮಾರುಕಟ್ಟೆ ಕಲ್ಪಿಸಲು ಮೇಳಗಳು ವೇದಿಕೆ

ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಮಾವು ಮೇಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಪ್ರಮುಖರಾದ ಕ್ಷಮಾ ಪಾಟೀಲ್, ಶ್ರೀನಿವಾಸ ಹೇಮಂತ್ ಕುಮಾರ್ ಬೀಳಗಿ, ನಿಧೀಶ್, ವರುಣ್, ಕುಮಾರ್, ಗುರುಪ್ರಸಾದ್, ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.
ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಮಾವು ಮೇಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಪ್ರಮುಖರಾದ ಕ್ಷಮಾ ಪಾಟೀಲ್, ಶ್ರೀನಿವಾಸ ಹೇಮಂತ್ ಕುಮಾರ್ ಬೀಳಗಿ, ನಿಧೀಶ್, ವರುಣ್, ಕುಮಾರ್, ಗುರುಪ್ರಸಾದ್, ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಡುಪಿ
ರಾಮನಗರ ಜಿಲ್ಲೆಯ ರೈತರು ಬೆಳೆಸಿದ ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಈ ಮೇಳ ವೇದಿಕೆಯಾಗಿದೆ. ಇದು ಕೇವಲ ಮಾರಾಟವಲ್ಲ, ರೈತರ ಶ್ರಮ ಮತ್ತು ಮಣ್ಣಿನ ಸುವಾಸನೆಯನ್ನು ಜನರಿಗೆ ತಲುಪಿಸುವ ಪ್ರಯತ್ನ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂ ಸಹಯೋಗದಲ್ಲಿ ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಮೇ 17ರವರೆಗೆ ನಡೆಯಲಿರುವ ಮಾವು ಮೇಳಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಮೇಳದಲ್ಲಿ 12ರಿಂದ 15 ತಳಿಗಳ ಮಾವಿನ ಹಣ್ಣುಗಳು ಲಭ್ಯವಿವೆ. ರಾಮನಗರ ಜಿಲ್ಲೆಯ ವಿವಿಧ ತಳಿಗಳ ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣುಗಳನ್ನು ನೇರವಾಗಿ ಬೆಳೆಗಾರರಿಂದ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ ಎಂದರು.
ತೋಟಗಾರಿಕೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ ಹೇಮಂತ್ ಕುಮಾರ್ ಬೀಳಗಿ, ಸಹಾಯಕ ನಿರ್ದೇಶಕರಾದ ನಿಧೀಶ್, ವರುಣ್, ಕುಮಾರ್, ಗುರುಪ್ರಸಾದ್, ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.

ಬಗೆ ಬಗೆ ಮಾವಿನ ಹಣ್ಣಿನ ಸ್ವಾದ

ರಾಮನಗರದಿಂದ ಆಗಮಿಸಿದ 10 ಮಂದಿ ರೈತರು ತಮ್ಮ ಮಾವಿನ ಬೆಳೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮಲ್ಲಿಕಾ 1.5 ಟನ್, ಕೇಸರ್ 600 ಕೆ.ಜಿ., ಇಮಾಮ್ಪಸಂದ್ 1 ಟನ್, ರಸಪುರಿ 500 ಕೆ.ಜಿ., ಸಿಂಧೂರ 500 ಕೆ.ಜಿ., ಸುಂದರಿ 200 ಕೆ.ಜಿ., ಆಲ್ಫೋನ್ಸೋ 4 ಟನ್, ತೋತಾಪುರಿ 100 ಕೆ.ಜಿ., ಕಲಾಪಾಡ್ 500 ಕೆ.ಜಿ., ಸಕ್ಕರೆಗುತ್ತಿ 500 ಕೆ.ಜಿ., ಮಲಗೊವ 1 ಟನ್, ದಸೇರಿ 1 ಟನ್ ಸೇರಿ ಒಟ್ಟು 11.4 ಟನ್ ಮಾವಿನ ಹಣ್ಣುಗಳನ್ನು ತರಲಾಗಿದೆ. ಸಂಘದಲ್ಲಿ 1,350 ಸದಸ್ಯರಿದ್ದು, 27 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಯಾವುದೇ ರಾಸಾಯನಿಕ ಬೆರೆಸದೆ ಮಾಗಿಸಿದ ರುಚಿಯಾದ ಮಾವಿನ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net