ಶಿಕ್ಷಣದ ಜತೆಗಿರಲಿ ಪರಿಣತಿ

 ಆಳ್ವಾಸ್ ಉದ್ಯೋಗ ಮೇಳದ ವಾಹಿತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಶಾಸಕ ಕಿರಣ್ ಕುವಾರ್ ಕೊಡ್ಗಿ ಉದ್ಘಾಟಿಸಿದರು. ಪ್ರಮುಖರಾದ ವಿವೇಕ ಆಳ್ವ, ಡಾ.ಉಮೇಶ ಪುತ್ರನ್, ರವಾನಂದ ಮೊದಲಾದವರಿದ್ದರು.
ಆಳ್ವಾಸ್ ಉದ್ಯೋಗ ಮೇಳದ ವಾಹಿತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಶಾಸಕ ಕಿರಣ್ ಕುವಾರ್ ಕೊಡ್ಗಿ ಉದ್ಘಾಟಿಸಿದರು. ಪ್ರಮುಖರಾದ ವಿವೇಕ ಆಳ್ವ, ಡಾ.ಉಮೇಶ ಪುತ್ರನ್, ರವಾನಂದ ಮೊದಲಾದವರಿದ್ದರು.
Published on

ಕುಂದಾಪುರ: ಯುವಜನತೆ ಮತ್ತು ವಿದ್ಯಾರ್ಥಿಗಳು ವ್ಯವಸ್ಥಿತವಾದ ಶಿಕ್ಷಣದ ಜತೆಗೆ ಎಲ್ಲ ವಿಭಾಗದಲ್ಲಿ ಪರಿಣತಿ ಹೊಂದಿರಬೇಕು. ಉದ್ಯೋಗ ಮೇಳದಂತಹ ಕಾರ್ಯಕ್ರಮಗಳಲ್ಲಿ ಯುವಜನರು ಭಾಗವಹಿಸಿ ಉದ್ಯೋಗ ಗಳಿಸುವ ಮೂಲಕ ದೇಶದ ಸತ್ಪ್ರಜೆಗಳಾಗಬೇಕು ಎಂದು ಶಾಸಕ ಎ.ಕಿರಣ್ ಕು

ಮಾ

ರ್ ಕೊಡ್ಗಿ ಹೇಳಿದರು.

ಮಾ

ಮಾ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ ಮಾಹಿತಿ ನೀಡಿದರು. ತಾಲೂಕು ಕಸಾಪ ಅಧ್ಯಕ್ಷ ಡಾ.ಉಮೇಶ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ನಿಯೋಜಿತ ಗವರ್ನರ್ ರವಾನಂದ, ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷೆ ಅಕ್ಷತಾ ಗಿರೀಶ್, ದಿನಕರ ಆರ್.ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ನುಡಿಸಿರಿ ಟಕ ಕುಂದಾಪುರ ತಾಲೂಕು ಸಂಯೋಜಕ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಉದಯ ಶೆಟ್ಟಿ ನಿರೂಪಿಸಿದರು.

ದೇಶದ ಯುವಜನರ ಉದ್ಯೋಗ ಕನಸುಗಳಿಗೆ ಬಲ ತುಂಬಲು ಕಳೆದ ಎರಡು ದಶಕಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠ್ಠಾನ ಉದ್ಯೋಗ ಅಭಿಯಾನ ಆಯೋಜಿಸುತ್ತಿದೆ. ಆಳ್ವಾಸ್ ಪ್ರಗತಿ-2026ರ ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ತರಬೇತಿ ಮತ್ತು ವಾರ್ಗದರ್ಶನವನ್ನು ಒದಗಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಓರಿಯೆಂಟೇಶನ್ ಮತ್ತು ಸಂದರ್ಶನ ಸಿದ್ಧತಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

— ವಿವೇಕ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯಾನೇಜಿಂಗ್ ಟ್ರಸ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net