ಸಾಮಾನ್ಯರನ್ನೂ ಸಾಧಕರನ್ನಾಗಿ ರೂಪಿಸುವ ಎಕ್ಸಲೆಂಟ್

 ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ನೀಟ್ ಸಾಧಕರ ಸನ್ಮಾನ ಸಮಾರಂಭದಲ್ಲಿ ಯುವರಾಜ್ ಜೈನ್, ರಶ್ಮಿತಾ ಯುವರಾಜ್ ಜೈನ್, ನೀಟ್ ಸಾಧಕರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಮೊದಲಾದವರಿದ್ದರು.
ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ನೀಟ್ ಸಾಧಕರ ಸನ್ಮಾನ ಸಮಾರಂಭದಲ್ಲಿ ಯುವರಾಜ್ ಜೈನ್, ರಶ್ಮಿತಾ ಯುವರಾಜ್ ಜೈನ್, ನೀಟ್ ಸಾಧಕರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ವಿದ್ಯಾರ್ಥಿಯ ಸಾಮರ್ಥ್ಯವನ್ನು ಕೇವಲ ಎಸ್ಸೆಸ್ಸೆಲ್ಸಿ ಅಂಕಗಳ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ. ಸೂಕ್ತ ಮಾರ್ಗದರ್ಶನ, ಶಿಸ್ತುಬದ್ಧ ಶಿಕ್ಷಣ ವ್ಯವಸ್ಥೆ ಹಾಗೂ ನಿರಂತರ ಪ್ರೋತ್ಸಾಹ ದೊರೆತರೆ ಸಾಮಾನ್ಯ ವಿದ್ಯಾರ್ಥಿಯೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು.
ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನ ರಾಜಸಭಾಂಗಣದಲ್ಲಿ ಭಾನುವಾರ ನಡೆದ 500ಕ್ಕೂ ಅಧಿಕ ಅಂಕ ಗಳಿಸಿದ ನೀಟ್ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯಲ್ಲಿ ಅವರ ಪರಿಶ್ರಮದ ಜತೆಗೆ ಶಿಕ್ಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಸಮರ್ಪಿತ ಸೇವೆಯೂ ಪ್ರಮುಖ ಪಾತ್ರ ವಹಿಸಿದೆ ಎಂದರು.
ಸನ್ಮಾನ ಸ್ವೀಕರಿಸಿದ ಚಿನ್ಮಯ್ ಜಿ.ಬೆಳ್ಳೂರು, ಶಿಕ್ಷಣ ಹಾಗೂ ಶಿಸ್ತಿಗೆ ಸಂಬಂಧಿಸಿದ ಕಟ್ಟುನಿಟ್ಟಿನ ಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿವೆ ಎಂದರು.
ತನ್ಮಯಿ ಎಂ.ಕೋಟಿ, ಕಾಲೇಜಿನಲ್ಲಿ ನಡೆಯುವ ಯೋಗ, ಧ್ಯಾನ ಹಾಗೂ ಇತರ ಚಟುವಟಿಕೆಗಳು ಶೈಕ್ಷಣಿಕ ಸಾಧನೆಗೆ ನೆರವಾಗಿವೆ ಎಂದು ತಿಳಿಸಿದರು.
ಪಾಲಕರ ಪ್ರತಿನಿಧಿಯಾಗಿ ಸತೀಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಶಿಸ್ತು ಹಾಗೂ ಸಂಸ್ಕಾರ ರೂಪಿಸುವಲ್ಲಿ ಎಕ್ಸಲೆಂಟ್ ಆಡಳಿತ ಮಂಡಳಿ ಸಲ್ಲಿಸುತ್ತಿರುವ ಸೇವೆಯನ್ನು ಅಭಿನಂದಿಸಿದರು. ಪುಷ್ಪರಾಜ್ ಸ್ವಾಗತಿಸಿದರು. ರಾಮಮೂರ್ತಿ, ತೇಜಸ್ವಿ ಭಟ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನಗೊಂಡ ವಿದ್ಯಾರ್ಥಿಗಳು

ನೀಟ್ ಪರೀಕ್ಷೆಯಲ್ಲಿ 500ಕ್ಕೂ ಅಧಿಕ ಅಂಕ ಗಳಿಸಿದ ನಿಖಿಲ್ ಎಸ್.ಎಸ್.(650), ತನ್ಮಯ್ ಎ.ಕೋಟಿ (647), ಚಿನ್ಮಯ್ ಜಿ. ಬೆಳ್ಳೂರು (629), ಹೇಮ ಯು.(620), ಈಶ್ವರ್ ಪುಂಡಲೀಕಪ್ಪ ಕೊಪ್ಪಳ (612), ಮೋಹಿತ್ ವೈ.ಪಿ.(611), ರಚನಾ ಎಸ್. ಎಂ., ಜಗದೀಶ್ ಅಪ್ಪಯ್ಯಪ್ಪ, ಸಮೀಕ್ಷಾ ಎಂ.ಎಸ್., ಯಶವಂತ್ ಕೆ., ಆದಿತ್ಯ ಬಾಬಾಸಾಬ್ ಚೌಗಲೆ, ನಿಶ್ಚಯ್ ಎಂ., ಚೇತನ್ ಜಿ.ರಾಘವ್, ರಾಹುಲ್ ಪಿ.ಗೌಡ, ಗುರುಚರಣ್ ಎಂ.ಶೆಟ್ಟಿ, ಪ್ರಣವ್ ಗೌಡ ಐ.ಎಸ್., ಸಂಕೀರ್ತನ್ ಕಟ್ಟಾ, ಮನನ್ ಎಸ್.ಗೌಡ, ಸಮರ್ಥ್ ಕೆ. ಎಸ್., ಶೋಧನ್ ಎಂ.ಎಸ್., ಪೂರ್ವಿಕಾ ಆರ್., ಶ್ಯಾಮ್‌ಕಲ್ಯಾಣ್ ಬೆಣ್ಣೂರ್, ಮನೀತ್, ಅಮೂಲ್ಯ ಶಂಕರ್ ಮಿರ್ಜಿ, ತೇಜಲ್ ಎಸ್. ಸ್ವಾಮಿ, ಸಮರ್ಥ್ ಎಸ್., ಆದಿತ್ ರಾಜ್ ಎ., ಸಮೀರಾ ಎಂ. ಆಚಾರ್ಯ, ಹಿಮವಂತ್ ಪಿ., ಕೋಮಲ ಎಸ್.ಕೆ., ನಿಹಾಲ್, ತರುಣಿಕಾ ಎಸ್., ವಿಸ್ಮಯ ವಿ.ಗೌಡ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net