ಉಪನ್ಯಾಸಕ ಸರ್ಫರಾಝ್ ಹಾಸಿಂ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಶಿಕ್ಷಣ ಸಂಯೋಜಕ ವಿಶ್ವನಾಥ್ ಎಸ್ಸೆಸ್ಸೆಲ್ಸಿ ಫಲಿತಾಂಶದ ವರದಿ ಮಂಡಿಸಿದರು. ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಸುರೇಶ್ ಭಟ್ನಗರ, ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ಉಳ್ಳಾಲ ತಾಲೂಕು ಅಧ್ಯಕ್ಷ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ಬಂಟ್ವಾಳ ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಜಿಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ಮನ್ಸೂರ್ ಮಂಚಿಲ, ಕೆಎಂಕೆ ಮಂಜನಾಡಿ, ಜಗದೀಶ್ ಶೆಟ್ಟಿ, ಬಂಟ್ವಾಳ ಬಿಇಒ ಮಾಲತಿ, ಸಾಜಿದ್ ಉಳ್ಳಾಲ, ಮುಸ್ತಫಾ ಹರೇಕಳ, ಲಿಲ್ಲಿ ಫಾಯಿಸ್, ಶಶಿಕಲಾ, ಜಬ್ಬಾರ್ ಬೋಳಿಯಾರ್, ರಜಿಯಾ ಇಬ್ರಾಹಿಂ, ಪುರುಷೋತ್ತಮ ಶೆಟ್ಟಿ ಪಿಲಾರ್, ದಿನೇಶ್ ರೈ, ಯೂಸುಫ್ ಬಾವ ದೇರಳಕಟ್ಟೆ, ದೇವಕಿ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಸ್ವಾಗತಿಸಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.