ಪವಿತ್ರ ಕಾರ್ಯಕ್ಕೆ ಸರ್ವರ ಸಹಭಾಗಿತ್ವ

 ಮೂಡುಪಡುಕೋಡಿ ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಲಾಯಿತು. ಕೃಷ್ಣ ಕುಮಾರ್ ಪೂಂಜ, ಪ್ರಶಾಂತ್ ಶೆಟ್ಟಿ ಮೂಡಾಯೂರು, ಜಯಾನಂದ ಪಿ., ಚಂದ್ರಶೇಖರ ಶೆಟ್ಟಿ ಪುಳಿಮಜಲು, ಯೂಸುಫ್ ವಿಟ್ಲ, ಹರೀಂದ್ರ ಟಿ.ಪೈ ಮತ್ತಿತರರಿದ್ದರು.
ಮೂಡುಪಡುಕೋಡಿ ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಲಾಯಿತು. ಕೃಷ್ಣ ಕುಮಾರ್ ಪೂಂಜ, ಪ್ರಶಾಂತ್ ಶೆಟ್ಟಿ ಮೂಡಾಯೂರು, ಜಯಾನಂದ ಪಿ., ಚಂದ್ರಶೇಖರ ಶೆಟ್ಟಿ ಪುಳಿಮಜಲು, ಯೂಸುಫ್ ವಿಟ್ಲ, ಹರೀಂದ್ರ ಟಿ.ಪೈ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಒಬ್ಬ ವ್ಯಕ್ತಿಯ ರಕ್ತದಾನದಿಂದ ಮೂರು ಜನರ ಜೀವ ಉಳಿಸಬಹುದು. ಪವಿತ್ರ ಕಾರ್ಯವಾದ ರಕ್ತದಾನದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ರಕ್ತದ ಅವಶ್ಯಕತೆ ಇದ್ದು, ಶಿಬಿರ ಆಯೋಜಿಸಿದ ಶಾರದೋತ್ಸವ ಸಮಿತಿ ಕಾರ್ಯ ಅಭಿನಂದನೀಯ ಎಂದು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಹೇಳಿದರು.
ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ ಮಂಗಳೂರು ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ವಿವಿಧ ಸಂಘ, ಸಂಸ್ಥೆಗಳ ಸಹಕಾರದಲ್ಲಿ ಮೂಡುಪಡುಕೋಡಿ ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ಭಾನುವಾರ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮೂಡಾಯೂರು ಶಿಬಿರ ಉದ್ಘಾಟಿಸಿ, ಜಾತಿ, ಮತ, ಧರ್ಮ ಭೇದವಿಲ್ಲದೆ ಇನ್ನೊಬ್ಬರ ಜೀವ ಉಳಿಸುವ ರಕ್ತದಾನ ಪುಣ್ಯದ ಕಾರ್ಯ ಎಂದರು.

ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ,ಟ್ರಸ್ಟ್ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ. ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕಾರಿಂಜ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಬಿ.ಮೂಡ ಸ.ಪ.ಪೂ ಕಾಲೇಜು ಪ್ರಾಂಶುಪಾಲ ಯೂಸುಫ್ ವಿಟ್ಲ, ಸಮಿತಿ ಕಾರ್ಯಾಧ್ಯಕ್ಷ ಹರೀಂದ್ರ ಟಿ.ಪೈ, ನೈನಾಡು ಗೆಳೆಯರ ಬಳಗ ಸಂಚಾಲಕ ನೆಲ್ವಿಸ್ಟರ್ ಪಿಂಟೊ, ದೇರೊಟ್ಟು ಮಾತಾ ಫೆರ್ನಾಂಡಿಸ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡೇನಿಸ್ ಫರ್ನಾಂಡಿಸ್ ದೇರೊಟ್ಟು, ಚೆನ್ನೈತ್ತೋಡಿ ಗ್ರಾಪಂ ಮಾಜಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಕಲ್ಲುಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜಪ್ಪ ಮೂಲ್ಯ ಅತ್ತಾಜೆ, ಉದ್ಯಮಿ ಶೇಖರ ಪೂಜಾರಿ ಅಗಲ್ದೋಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಾಲಿನಿ, ಕಜೆಕೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಶಂಕರಶೆಟ್ಟಿ ಬೆದ್ರಮಾರ್, ಪುಂಜಾಲಕಟ್ಟೆ ಶೌರ್ಯ ಘಟಕದ ಮೋಹನ ಸಾಲ್ಯಾನ್, ವಗ್ಗ ವಲಯ ಮೇಲ್ವಿಚಾರಕ ಚಂದ್ರಶೇಖರ್, ಜ್ಞಾನ ವಿಕಾಸ ಕೇಂದ್ರದ ಮೇಲ್ವಿಚಾರಕಿ ಅಶ್ವಿನಿ, ರೋಟರಿ ಕ್ಲಬ್ ಕಾರ್ಯದರ್ಶಿ ಫ್ರಾನ್ಸಿಸ್ ವಿ.ವಿ., ಪ್ರಮುಖರಾದ ಅಬ್ದುಲ್ ನಜೀರ್ ಸಾಹೇಬ್, ರಂಜಿತ್ ಶೆಟ್ಟಿ ಅರ್ಕೆದೊಟ್ಟು, ಜಹೀರ್ ಇರ್ವತ್ತೂರು, ಸತೀಶ ಕರ್ಕೇರ, ಹರೀಶ್ ಶೆಟ್ಟಿ ಕುಮೇರ್, ಇಬ್ರಾಹಿಂ ಇರ್ವತ್ತೂರು, ಸತೀಶ್ ಪೂಜಾರಿ ಬೆನಕ, ಸುಪ್ರಿತ್ ಜೈನ್, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಅಮೃತಾ ಎಸ್. ಪ್ರಾರ್ಥಿಸಿದರು. ಡಾ.ರಾಮಕೃಷ್ಣ ಎಸ್. ಸ್ವಾಗತಿಸಿ, ಪ್ರಸ್ತಾವಿಸಿದರು. ದಯಾನಂದ ಎರ್ಮೆನಾಡು ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 110 ಮಂದಿ ರಕ್ತದಾನ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net