ಸಮಾಜ ಜೋಡಿಸುವುದರಿಂದ ದುರ್ಬಲರೂ ಬಲಿಷ್ಠ

ಬಾರಕೂರು ಕಚ್ಚೂರು ಶ್ರೀ ವಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ ಭಾನುವಾರ ನಡೆದ 5 ದಿನಗಳ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಬಾರಕೂರು ಕಚ್ಚೂರು ಶ್ರೀ ವಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ ಭಾನುವಾರ ನಡೆದ 5 ದಿನಗಳ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
Published on
ಬ್ರಹ್ಮಾವರ: ಸಮಾಜವನ್ನು ಜೋಡಿಸುವ ಕೆಲಸ ವಾಡಿದಲ್ಲಿ ದುರ್ಬಲ ಸವಾಜವೂ ಬಲಿಷ್ಠವಾಗಲು ಸಾಧ್ಯ ಎನ್ನುವುದನ್ನು ಕಚ್ಚೂರು ಶ್ರೀ ವಾಲ್ತಿ ದೇವಿ ದೇವಸ್ಥಾನ ವಾದರಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಾರಕೂರು ಕಚ್ಚೂರು ಶ್ರೀ ವಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದದಲ್ಲಿ ಭಾನುವಾರ ನಡೆದ 5 ದಿನಗಳ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಆದಿ ಜಾಂಬವ ಸಂಸ್ಥಾನ ಮಠ ಚಿತ್ರದುರ್ಗದ ಶ್ರೀ ಷಡಕ್ಷರ ಮುನಿ ದೇಶಿ ಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ದೇವಳ ಧರ್ಮದರ್ಶಿ ಗೋಕುಲ್‌ದಾಸ್ ಬಾರ್ಕೂರು ಸ್ವಾಗತಿಸಿ, ಪ್ರಾಸ್ತಾವಿಕ ವಾತನಾಡಿ ಕರಾವಳಿ ಜಿಲ್ಲೆಯಲ್ಲಿ ಬಬ್ಬುಸ್ವಾಮಿ ದೇವಸ್ಥಾನಗಳು ಸರ್ವಧರ್ಮ ಸರ್ವಜಾತಿ ಜನಾಂಗದವರ ಆರಾಧನಾ ಕೇಂದ್ರವಾಗಿದ್ದು ಇಲ್ಲಿನ ವಾಲ್ತಿದೇವಿ ದೇವಸ್ಥಾನ ಕೂಡಾ ಜಾತಿ ಜನಾಂಗವನ್ನು ಮೀರಿ ಧಾರ್ಮಿಕ ಭಾವನೆಯನ್ನು ತುಂಬಿ ಸನಾತನ ಸಂಸ್ಕೃತಿಗೆ ಅನೇಕ ಕೊಡುಗೆ ನೀಡುತ್ತಿದೆ. ಇಲ್ಲಿನ ದೇವಸ್ಥಾನಕ್ಕೆ ಮತ್ತು ಕರಾವಳಿ ಜಿಲ್ಲೆಗೆ ಸಂಸದ ಮಲ್ಯರು ಬಂದರು ಜಾರ್ಜ್ ಫರ್ನಾಂಡಿಸ್ ಕೊಂಕಣ ರೈಲೆ ನೀಡಿ ಜನರ ಮನದಲ್ಲಿ ಸದಾ ಇರುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಕರಾವಳಿ ಜಿಲ್ಲೆ ಮತ್ತು ನಮ್ಮ ದೇವಸ್ಥಾನಕ್ಕೆ ಚಿರಕಾಲ ಜನರು ನೆನಪು ಇರಿಸುವಂತ ಕೊಡುಗೆ ನೀಡಲಿ ಎಂದರು. ದೇವಳ ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಮುಂಡಾಲ ಮಹಾಸಭಾ ಅಧ್ಯಕ್ಷ ಶಂಕರ ಪದಕಣ್ಣಾಯ, ಬೆಂಗಳೂರು ಉದ್ಯಮಿ ಹರೀಶ್ ಕೊಲಕಾಡಿ, ಗುರಿಕಾರ ಹರಿಶ್ಚಂದ್ರ, ಪ್ರಮುಖರಾದ ಮೂಡಿಗೆರೆ ಚನ್ನಕೇಶವ, ಮಂಜುನಾಥ ಎಡೆಮಡಲು, ಚಂದ್ರ ಕುವಾರ್, ನಿರಂಜನ ಕುವಾರ್, ದಿನೇಶ್ ಗುರಿಕಾರ್, ಹರೀಶ್ ಗುರಿಕಾರ್, ಭಾಸ್ಕರ್ ಗುರಿಕಾರ್, ಲಕ್ಷ್ಮಣ ಪಿ., ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಪ್ರೇವಾನಂದ ಬಾರ್ಕೂರು, ಉತ್ಸವ ಸಮಿತಿ ಅಧ್ಯಕ್ಷ ರವಿರಾಜ್ ಹೆಜವಾಡಿ, ಕಮಲಾಕ್ಷ ಬಾರಕೂರು, ನರಸಿಂಹ ಹೇರಾಡಿ, ಆಡಳಿತ ಮಂಡಳಿ ಮತ್ತು ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂತೋಷ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.

ಕಚ್ಚೂರು ಸಾಹಿತ್ಯ ಸೇವಾ ಪುರಸ್ಕಾರ

ಉಡುಪಿ ಶಾಸಕ ಯಶ್‌ಪಾಲ್ ಎ.ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುವಾರ್ ಕೊಡ್ಗಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಐವನ್ ಡಿಸೋಜ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಕುಂದಾಪುರದ ಕೆ.ಕೆ ಕಾಳಾವರ್ಕರ್ ಹಾಗೂ ತುಳು ಸಾಹಿತಿ ಮಂಗಳೂರಿನ ಮೋಹನ್ ಕಣ್ಣೂರು ಅವರಿಗೆ ಕಚ್ಚೂರು ಸಾಹಿತ್ಯ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net