ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅನಂತಪದ್ಮಾನಾಭ ಆಸ್ರಣ್ಣ ದೀಪ ಪ್ರಜ್ವಲನೆ ಮಾಡಿದರು. ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆನುವಂಶಿಕ ಮೊಕ್ತೇಸರ, ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಕರ್ನಾಟಕ ಬ್ಯಾಂಕ್ ಡಿಜಿಎಂ ಬಿ.ಗೋಪಾಲಕೃಷ್ಣ ಸಾಮಗ, ಖ್ಯಾತ ನಟ ಅರವಿಂದ ಬೋಳಾರ್, ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್, ಉದ್ಯಮಿ ಗುರುಪ್ರಸಾದ್ ಅಮೀನ್ ನಾನಿಲ್, ಕೊಡಿಯಾಲ್‌ಬೈಲ್ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ ವಿಶ್ವಾನಾಥ ಮಂಕಿಸ್ಟಾೃಡ್, ಉದ್ಯಮಿ ಶಶೀಂದ್ರ ಎಂ.ಸಾಲ್ಯಾನ್, ಜಯಕೃಷ್ಣ ಕೋಟ್ಯಾನ್, ಪುಷ್ಪ ದಯಾನಂದ, ರಮೇಶ್ ಬಂಗೇರ, ರಾಜೇಂದ್ರ ಪ್ರಸಾದ್ ಎಕ್ಕಾರ್, ಶಿವಣ್ಣ ಅಂಚನ್, ನವೀನ್ ಕುಮಾರ್ ಗುಜ್ಜರಬೆಟ್ಟು, ವಿಠಲ ಕಾಂಚನ್, ನಿತಿನ್ ಕುಂದರ್, ಅನಿಲ್ ಪೂಜಾರಿ, ಸತೀಶ್ ಶೆಟ್ಟಿ ಎಕ್ಕಾರ್, ಉದಯ ಸುವರ್ಣ, ಯಶವಂತ ಸಾಲ್ಯಾನ್, ಸುಧಾಕರ ಅಮೀನ್ ಉಪಸ್ಥಿತರಿದ್ದರು.