ಇಎಸ್ಐ ವೈದ್ಯರಿಂದ ಶಿಫರಸ್ಸು ಪತ್ರ ಪಡೆದು ಬಂದವರಿಗೆ ಮನೋವೈದ್ಯಕಿಯ ಚಿಕಿತ್ಸೆ, ತಜ್ಞ ಮನೋವೈದ್ಯರಿಂದ ಎಲ್ಲಾ ತರಹದ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ, ಮದ್ಯಪಾನ ಹಾಗೂ ಮಾದಕ ವ್ಯಸನಗಳಿಂದ ಮುಕ್ತರಾಗಲು ವೈಜ್ಞಾನಿಕ ಪುನರ್ವಸತಿ ಸೌಲಭ್ಯ ಕಲ್ಪಸಲಾಗುವುದು. ಆಟಿಸಂ ಮತ್ತು ಕಲಿಕಾ ನ್ಯೂನತೆಗಳ ಚಿಕಿತ್ಸೆ, ವಿಶೇಷ ಅಗತ್ಯವಿರುವ ಮಕ್ಕಳಿಗಾಗಿ ಸಮಗ್ರ ಆರೈಕೆ ಮತ್ತು ತರಬೇತಿ ನೀಡಲಾಗುವುದು. ಮಾತು ಮತ್ತು ಸಂವಹನ ಸಮಸ್ಯೆಗಳಿಗೆ ಪರಿಣಿತರಿಂದ ವೈಜ್ಞಾನಿಕ ಚಿಕಿತ್ಸೆ ಲಭ್ಯವಿದೆ. ಇದರೊಂದಿಗೆ ಕಣ್ಣಿನ ಮತ್ತು ದಂತ ಚಿಕಿತ್ಸೆ, ಡಯಾಲಿಸೀಸ್ ಸೌಲಭ್ಯಗಳನ್ನು ಫಲಾನುಭವಿಗಳು ಪಡೆಯಬಹುದು ಎಂದರು.