ಮಲತ್ಯಾಜ್ಯ ಘಟಕ ನಿರ್ಮಾಣದಿಂದ ಪರಿಸರ ಹಾನಿ

ತಿಮರಡ್ಡದಲ್ಲಿ ಮಲತ್ಯಾಜ್ಯ ಟಕ ವಿರೋಧಿಸಿ ಕಡಬ ಪಟ್ಟಣ ಪಂಚಾಯಿತಿ ಮುಂಭಾದಲ್ಲಿ ಸ್ಥಳೀಯರು ಪ್ರತಿಭಟಿಸಿದರು. ಪ್ರಮುಖರಾದ ಕೆ.ಎಚ್.ಹಂಝ, ಚಂದ್ರಶೇಖರ ಕರ್ಕೇರ, ಇಸ್ಮಾಯಿಲ್ ಕೆ.ಎಚ್. ಇತರರು ಇದ್ದರು.
ತಿಮರಡ್ಡದಲ್ಲಿ ಮಲತ್ಯಾಜ್ಯ ಟಕ ವಿರೋಧಿಸಿ ಕಡಬ ಪಟ್ಟಣ ಪಂಚಾಯಿತಿ ಮುಂಭಾದಲ್ಲಿ ಸ್ಥಳೀಯರು ಪ್ರತಿಭಟಿಸಿದರು. ಪ್ರಮುಖರಾದ ಕೆ.ಎಚ್.ಹಂಝ, ಚಂದ್ರಶೇಖರ ಕರ್ಕೇರ, ಇಸ್ಮಾಯಿಲ್ ಕೆ.ಎಚ್. ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕಡಬ
ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಳಾರ ತಿಮರಡ್ಡದಲ್ಲಿ ಮಲತ್ಯಾಜ್ಯ ಟಕಕ್ಕೆ ಜಾಗ ಗುರುತಿಸುವ ವಿಚಾರದಲ್ಲಿ ಅಧಿಕಾರಿಗಳು ತಪ್ಪು ವಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದರೆ ವಾಸ್ತವಾಂಶದ ಅರಿವಾಗುತ್ತದೆ ಎಂದು ಕಳಾರ ಪರಿಸರ ಸಂರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಹಂಝ ಕಳಾರ ಒತ್ತಾಯಿಸಿದರು.
ಕಳಾರ ತಿಮರಡ್ಡದ ಜನವಸತಿ ಪ್ರದೇಶದಲ್ಲಿ ಮಲತ್ಯಾಜ್ಯ ಟಕ ಸ್ಥಾಪಿಸುವುದರ ವಿರುದ್ಧ ಕಡಬ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ತಿಮರಡ್ಡದಲ್ಲಿ ಕೇಂದ್ರ ಸರ್ಕಾರದ ಎಸ್‌ಟಿಪಿ-ಎಫ್‌ಎಸ್‌ಟಿಪಿ ಯೋಜನೆಯಡಿಯಲ್ಲಿ ಮಲತ್ಯಾಜ್ಯ ಟಕ ಸ್ಥಾಪಿಸಲು ಪಟ್ಟಣ ಪಂಚಾಯಿತಿ ಮುಂದಾಗಿದೆ. ಅದು ಜನವಸತಿ ಪ್ರದೇಶವಾಗಿದ್ದು, ಸಮೀಪದಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಕೆಂದ್ರ, ದೇವಸ್ಥಾನ ಹಾಗೂ ದೈವಸ್ಥಾನ, ಕೆರೆ ಇದೆ. ಎಂಡೋಸಲ್ಫಾನ್ ಪೀಡಿತರು ಕೂಡ ಪರಿಸರದಲ್ಲಿ ವಾಸಿಸುತ್ತಿದ್ದಾರೆ. ಈ ಭಾಗದಲ್ಲಿ ಮಲತ್ಯಾಜ್ಯ ಘಟಕ ಸ್ಥಾಪನೆಯಾದರೆ ಸಾರ್ವಜನಿಕರ ಆರೋಗ್ಯ, ಪರಿಸರಕ್ಕೆ ಹಾನಿಯಾಗಲಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಪರಿಸ್ಥಿತಿ ಅವಲೋಕಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ಪಪಂ ಅಧ್ಯಕ್ಷೆ ತಮನ್ನಾ ಜಬೀನ್ ಪ್ರತಿಕ್ರಿಯಿಸಿ, ತಿಮರಡ್ಡದಲ್ಲಿ ಮಲತ್ಯಾಜ್ಯ ಟಕ ನಿರ್ವಾಣಕ್ಕೆ ಸ್ಥಳೀಯರು ವಿರೋಧಿಸಿದ್ದರಿಂದ ಈಗಾಗಲೇ ತುರ್ತು ಸಭೆ ಕರೆದು ಬೇರೆ ಸ್ಥಳ ನಿಗದಿಪಡಿಸುವಂತೆ ನಿರ್ಣಯ ಅಂಗೀಕರಿಸಿ ಕಂದಾಯ ಇಲಾಖೆಗೆ ಕಳುಹಿಸಿದ್ದೇವೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯ ಸಭೆ ಕರೆದು ನಿರ್ಣಯ ಅಂಗೀಕರಿಸಲಾಗುವುದು ಎಂದು ಭರವಸೆ ನೀಡಿದರು.
ಪಪಂ ಮುಖ್ಯಾಧಿಕಾರಿ ಇ.ಲೀಲಾವತಿ ಹಾಗೂ ಕಡಬ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಹೋರಾಟ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಕೆ.ಎಚ್., ಕಳಾರ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿವಾನ್ ಅಡ್ಕಾಡಿ, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೇರ ಪೆಲತ್ತೋಡಿ, ಹೋರಾಟ ಸಮಿತಿ ಪದಾಧಿಕಾರಿಗಳು, ಸ್ಥಳಿಯರು ಭಾಗವಹಿಸಿದ್ದರು.

ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಜಿಲ್ಲೆಯ ಬೇರೆ ಬೇರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಅನುಷ್ಠಾನ ವಾಡಲಾಗಿದೆ. ಶ್ರೀ ಅನುಷ್ಠಾನ ವಾಡಲು ಜಿಲ್ಲಾಧಿಕಾರಿ ಆದೇಶ ಇದ್ದು, ವಿರೋಧ ಎದುರಾದರೆ ಪೊಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ಆರಂಭಿಸುವಂತೆ ನಮಗೆ ಕಟ್ಟುನಿಟ್ಟು ಆದೇಶವಿದೆ. ಆದರೂ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿಕೊಡುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net