ಪ್ರತಿ ಮಗುವಿಗೂ ಸುರಕ್ಷೆ ಖಾತ್ರಿ

 ಆಳ್ವಾಸ್ ಪಿಯು ಕಾಲೇಜಿನ ಪೋಕ್ಸೋ ಜಾಗೃತಿ ಕಾರ್ಯಕ್ರಮದಲ್ಲಿ ಗೌತಮ್ ಎಚ್. ಶೆಟ್ಟಿಗಾರ್, ಝಾನ್ಸಿ ಪಿ.ಎನ್., ರೆನಿಟಾ ಡಿಸೋಜ, ಮಲ್ಲಿಕಾ ಎಂ.ಆರ್., ಶ್ವೇತಾಶ್ರೀ ಮತ್ತಿತರರಿದ್ದರು.
ಆಳ್ವಾಸ್ ಪಿಯು ಕಾಲೇಜಿನ ಪೋಕ್ಸೋ ಜಾಗೃತಿ ಕಾರ್ಯಕ್ರಮದಲ್ಲಿ ಗೌತಮ್ ಎಚ್. ಶೆಟ್ಟಿಗಾರ್, ಝಾನ್ಸಿ ಪಿ.ಎನ್., ರೆನಿಟಾ ಡಿಸೋಜ, ಮಲ್ಲಿಕಾ ಎಂ.ಆರ್., ಶ್ವೇತಾಶ್ರೀ ಮತ್ತಿತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಕಿರುಕುಳ, ಶೋಷಣೆ ಹಾಗೂ ಅಶ್ಲೀಲ ಚಟುವಟಿಕೆಗಳಿಂದ ರಕ್ಷಿಸುವ ಉದ್ದೇಶದಿಂದ ಪೋಕ್ಸೋ ಜಾರಿಗೆ ತರಲಾಗಿದ್ದು, ಪ್ರತಿ ಮಗುವಿಗೂ ಸುರಕ್ಷಿತ ಹಾಗೂ ಗೌರವಯುತ ವಾತಾವರಣದಲ್ಲಿ ಬದುಕುವ ಹಕ್ಕು ಖಾತ್ರಿಪಡಿಸುವುದು ಕಾಯ್ದೆಯ ಉದ್ದೇಶ ಎಂದು ತರಬೇತುದಾರ ಗೌತಮ್ ಎಚ್. ಶೆಟ್ಟಿಗಾರ್ ಹೇಳಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮಕ್ಕಳ ರಕ್ಷಣಾ ಸಮಿತಿ ಹಾಗೂ ಮಕ್ಕಳ ಹಕ್ಕುಗಳ ಸಂಘದ ವತಿಯಿಂದ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪೋಕ್ಸೋ : ಸುರಕ್ಷೆ, ಜಾಗೃತಿ ಮತ್ತು ಸಬಲೀಕರಣ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 18 ವಷರ್ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದೌರ್ಜನ್ಯದಿಂದ ರಕ್ಷಿಸುವುದು ಕಾಯ್ದೆಯ ಉದ್ದೇಶ.

ದೌರ್ಜನ್ಯವನ್ನು ಮುಚ್ಚಿಡದೆ ಪಾಲಕರು, ಶಿಕ್ಷಕರು ಅಥವಾ ನಂಬಿಕೆಗೆ ಅರ್ಹ ಹಿರಿಯರ ಗಮನಕ್ಕೆ ತರಬೇಕು. ಡಿಜಿಟಲ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ, ಚಿತ್ರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಆಪ್ತ ಸಮಾಲೋಚಕಿ ರೆನಿಟಾ ಡಿಸೋಜ ಉಪಸ್ಥಿತರಿದ್ದರು. ಮಕ್ಕಳ ರಕ್ಷಣಾ ಸಮಿತಿ ರಕ್ಷಣಾಧಿಕಾರಿ ಮಲ್ಲಿಕಾ ಎಂ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಶ್ವೇತಾಶ್ರೀ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net