ಬೆಳಕು ಮೂಡಿಸುವ ಮಾರ್ಗದರ್ಶಕರು

 ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ದಂಪತಿ ವಾಸುದೇವ ಭಟ್-ಪ್ರಭಾವತಿ ದಂಪತಿಯನ್ನು ಗೌರವಿಸಲಾಯಿತು. ಆಯಿಷಾ ಎ.ಎ.ಪೆರ್ಲ, ರಾಜಾರಾಮ, ಅಬ್ದುಲ್ ರಜಾಕ್, ಮೊಹಮ್ಮದಾಲಿ ಪೆರ್ಲ ಮತ್ತಿತರರಿದ್ದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ದಂಪತಿ ವಾಸುದೇವ ಭಟ್-ಪ್ರಭಾವತಿ ದಂಪತಿಯನ್ನು ಗೌರವಿಸಲಾಯಿತು. ಆಯಿಷಾ ಎ.ಎ.ಪೆರ್ಲ, ರಾಜಾರಾಮ, ಅಬ್ದುಲ್ ರಜಾಕ್, ಮೊಹಮ್ಮದಾಲಿ ಪೆರ್ಲ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಶಿಕ್ಷಕರು ಪಾಠ ಹೇಳಿಕೊಡುವವರು ಮಾತ್ರವಲ್ಲ ಬದುಕಿನ ದಾರಿಯಲ್ಲಿ ಬೆಳಕಿನ ಹೆಜ್ಜೆ ಗುರುತು ಮೂಡಿಸುವ ಮಾರ್ಗದರ್ಶಕರು. ಇಂತಹ ಗುರುಗಳ ಸೇವೆಯನ್ನು ನೆನಪಿಸಿಕೊಂಡು, ಅವರ ಮನೆಬಾಗಿಲಿಗೆ ತೆರಳಿ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಎಣ್ಮಕಜೆ ಗ್ರಾಪಂ ಸದಸ್ಯೆ ಆಯಿಷಾ ಎ.ಎ.ಪೆರ್ಲ ಹೇಳಿದರು.
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ತಮ್ಮ ವಾರ್ಡಿನ ಹಿರಿಯ ನಿವೃತ್ತ ಶಿಕ್ಷಕರನ್ನು ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸುವ ಮೂಲಕ ಶಿಕ್ಷಕರ ದಿನವನ್ನು ಅರ್ಥಪೂರ್ಣ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಿ ಮಾತನಾಡಿದರು.
ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯ ನಿವೃತ್ತ ಶಿಕ್ಷಕ ವಾಸುದೇವ ಭಟ್(ಶಿವ ಪಡ್ರೆ) ಮತ್ತವರ ಪತ್ನಿ, ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕಿ ಪ್ರಭಾವತಿ ದಂಪತಿ, ನಿವೃತ್ತ ಮುಖ್ಯಶಿಕ್ಷಕ ಅಹಮ್ಮದ್ ಅಲಿ ಮಾಸ್ಟರ್, ಪೆರ್ಲದ ನಿವೃತ್ತ ಶಿಕ್ಷಕಿಯರಾದ ಜಯಕುಮಾರಿ ಹಾಗೂ ಸರೋಜಾ ಪೆರ್ಲ ಅವರನ್ನು ಗೌರವಿಸಲಾಯಿತು.
ಕೇರಳ ರಾಜ್ಯ ಕಿರು ಕೈಗಾರಿಕಾ ವ್ಯವಸಾಯಿ ಜಿಲ್ಲಾ ಸಮಿತಿ ಅಧ್ಯಕ್ಷ ರಾಜಾರಾಮ ಪೆರ್ಲ, ಕೆಇಬಿ ನಿವೃತ್ತ ಸಹಾಯಕ ಇಂಜಿನಿಯರ್ ಅಬ್ದುಲ್ ರಜಾಕ್ ಪೆರ್ಲ, ನಿವೃತ್ತ ಸಬ್ ರಿಜಿಸ್ಟ್ರಾರ್ ಮೊಹಮ್ಮದಾಲಿ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net