ಸಂಸ್ಕೃತಿಯಿಂದ ಮಾನವೀಯ ಮೌಲ್ಯಗಳ ವೃದ್ಧಿ

ನಟರಾಜ ಡ್ಯಾನ್ಸ್​ ಕಂಪನಿ ವಾರ್ಷಿಕೋತ್ಸವ ಹಾಗೂ ಬೇಸಿಗೆ ಶಿಬಿರವನ್ನು ಶ್ರೀ ಸೇನೇಶ್ವರ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ ಬೈಂದೂರು ಉದ್ಘಾಟಿಸಿದರು. ಪ್ರಮುಖರಾದ ನರಸಿಂಹ ನಾಯಕ್​, ನಟರಾಜ್​, ಗೀತಾ ಪ್ರಸನ್ನ ಮತ್ತಿತರರಿದ್ದರು.
ನಟರಾಜ ಡ್ಯಾನ್ಸ್​ ಕಂಪನಿ ವಾರ್ಷಿಕೋತ್ಸವ ಹಾಗೂ ಬೇಸಿಗೆ ಶಿಬಿರವನ್ನು ಶ್ರೀ ಸೇನೇಶ್ವರ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ ಬೈಂದೂರು ಉದ್ಘಾಟಿಸಿದರು. ಪ್ರಮುಖರಾದ ನರಸಿಂಹ ನಾಯಕ್​, ನಟರಾಜ್​, ಗೀತಾ ಪ್ರಸನ್ನ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಟರಾಜ ಡ್ಯಾನ್ಸ್​ ಕಂಪನಿ 9ನೇ ವಾರ್ಷಿಕೋತ್ಸವ
  • ಬೇಸಿಗೆ ಶಿಬಿರ ಉದ್ಘಾಟನೆ
ಬೈಂದೂರು: ಸಂಸ್ಕೃತಿಯ ಪ್ರೀತಿ ಜೀವನದಲ್ಲಿ ಹೊಸ ಬದುಕನ್ನು ರೂಪಿಸುತ್ತದೆ. ಮಾನವೀಯ ಮೌಲ್ಯ ವೃದ್ಧಿಸಿ ಸಮಾಜಮುಖಿ ಚಿಂತನೆಗಳನ್ನು ಕಲ್ಪಿಸುತ್ತದೆ ಎಂದು ಶ್ರೀ ಸೇನೆಶ್ವರ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ ಬೈಂದೂರು ಹೇಳಿದರು.
ಇಲ್ಲಿನ ಶ್ರೀ ಶಾರದಾ ವೇದಿಕೆಯಲ್ಲಿ ನಟರಾಜ ಡ್ಯಾನ್ಸ್​ ಕಂಪನಿ 9ನೇ ವಾರ್ಷಿಕೋತ್ಸವ ಹಾಗೂ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸ್ಥಳಿಯ ರೋಟರಿ ಕ್ಲಬ್​ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ ಮಾತನಾಡಿ, ಹಾಡುವುದು ಮತ್ತು ಕುಣಿಯುವುದು ಹುಟ್ಟುತ್ತಲೇ ಬರುವ ಸಹಜ ಪ್ರವೃತ್ತಿ. ನಿಜವಾದ ಶಿಕ್ಷಣ ಹಾಡಿನಂತೆ ಕುಣಿತದಂತೆ ಸಂತೋಷಕರವಾಗಿರಬೇಕು. ಈ ಪ್ರಕ್ರಿಯೆ ಮಗುವಿನ ವಿದ್ಯಾಭ್ಯಾಸಕ್ಕೆ ಎಂದೆಂದಿಗೂ ಭಂಗ ತರಲಾರವು ಎಂದರು.
ಲಾವಣ್ಯ ಅಧ್ಯಕ್ಷ ನರಸಿಂಹ ನಾಯಕ್​, ಕೊರಿಯೋಗ್ರಾಫರ್​ ನಟರಾಜ್​ ಇದ್ದರು.
ಗೀತಾ ಪ್ರಸನ್ನ ಸ್ವಾಗತಿಸಿದರು. ದೀಪಿಕಾ ರವಿ ನಿರೂಪಿಸಿದರು. ಪಾರ್ವತಿ ವಂದಿಸಿದರು. ನಂತರ ಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸತಿಕ ಸಂಭ್ರಮ ನಡೆಯಿತು.
"

ನೃತ್ಯ ಪ್ರಾಕಾರಗಳು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗಿವೆ. ಬದುಕಿನಲ್ಲಿ ಪರಿಪೂರ್ಣತೆ ಕಾಣಬೇಕಾದರೆ ಹಾಗೂ ವ್ಯಕ್ತಿತ್ವದ ಬೆಳವಣಿಗೆಗೆ ಬಾಲ್ಯದಿಂದಲೇ ಸಾಂಸತಿಕವಾಗಿ ತೊಡಗಿಸಿಕೊಳ್ಳಬೇಕು.

— ಆನಂದ ಮದ್ದೋಡಿ, ಸುರಭಿ ಸಂಸ್ಥೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net