ಕಲಿತ ಶಾಲೆ, ಊರಿನ ಕೀರ್ತಿ ಹೆಚ್ಚಿಸಿ

ಉಡುಪಿಯ ವಾಸುದೇವ ಕೃಪಾ ಶಾಲೆಯ ವಾರ್ಷಿಕೋತ್ಸವದಲ್ಲಿ ಜಯಕರ್​ ಶೆಟ್ಟಿ ಇಂದ್ರಾಳಿ ಮಾತನಾಡಿದರು. ಕೆ.ಅಣ್ಣಪ್ಪ ಶೆಣೈ, ದಯಾನಂದ್​ ಕೋಟ್ಯಾನ್​, ನಿಶಾ, ಗಗನ್​ ಇದ್ದರು.
ಉಡುಪಿಯ ವಾಸುದೇವ ಕೃಪಾ ಶಾಲೆಯ ವಾರ್ಷಿಕೋತ್ಸವದಲ್ಲಿ ಜಯಕರ್​ ಶೆಟ್ಟಿ ಇಂದ್ರಾಳಿ ಮಾತನಾಡಿದರು. ಕೆ.ಅಣ್ಣಪ್ಪ ಶೆಣೈ, ದಯಾನಂದ್​ ಕೋಟ್ಯಾನ್​, ನಿಶಾ, ಗಗನ್​ ಇದ್ದರು.
Published on

* ವಿದ್ಯಾರ್ಥಿಗಳಿಗೆ ಜಯಕರ್​ ಶೆಟ್ಟಿ ಇಂದ್ರಾಳಿ ಕರೆ

* ವಾಸುದೇವ ಕೃಪಾ ವಿದ್ಯಾಮಂದಿರದ ವಾರ್ಷಿಕೋತ್ಸವ

ಉಡುಪಿ: ಭವಿಷ್ಯದಲ್ಲಿ ಶೈಕ್ಷಣಿಕ ಸಾಧನೆಗಾಗಿ ಈಗಿನಿಂದಲೇ ಕಠಿಣ ಪರಿಶ್ರಮ ಪಡಬೇಕು. ನಿತ್ಯವೂ ಶಾಲೆಯಲ್ಲಿ ಕಲಿಸಿದ ಪಠ್ಯಗಳನ್ನು ಮನೆಯಲ್ಲಿ ಓದುವ ಮೂಲಕ ಮನನ ಮಾಡಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಬೇಕು. ತನ್ಮೂಲಕ ಕಲಿತ ಶಾಲೆ ಹಾಗೂ ಊರಿನ ಕೀರ್ತಿ ಹೆಚ್ಚಿಸಬೇಕು ಎಂದು ಬಡಗಬೆಟ್ಟು ಕೋ-ಆಪರೇಟಿವ್​ ಸೊಸೈಟಿಯ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಭಾರತ್​ ಸ್ಕೌಟ್ಸ್​ ಆಯುಕ್ತ ಜಯಕರ್​ ಶೆಟ್ಟಿ ಇಂದ್ರಾಳಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಡುಪಿಯ ಬೈಲೂರಿನಲ್ಲಿರುವ ವಾಸುದೇವ ಕೃಪಾ ವಿದ್ಯಾಮಂದಿರದ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ 20ನೇ ವರ್ಷದ ವಾರ್ಷಿಕೋತ್ಸವವನ್ನು ಶಾಲೆಯ ಧ್ವಜಾರೋಹಣದ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಡಾ. ಕೆ. ಶ್ರೀಧರ್​ ಆರ್​. ಪೈ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದಯಾನಂದ್​ ಕೋಟ್ಯಾನ್​, ಹಳೆಯ ವಿದ್ಯಾರ್ಥಿಗಳಾದ ಹಿತಾಶ್ರೀ, ರಂಜನ್​ ರಾವ್​, ಶಾಲಾ ನಾಯಕ ಗಗನ್​, ನಿವೃತ್ತ ಮುಖ್ಯೋಪಾಧ್ಯಾಯಿನಿ ಕಲ್ಯಾಣಿ ಯು. ಪೈ ಉಪಸ್ಥಿತರಿದ್ದರು.
ಶಾಲಾ ಮುಖ್ಯೊಪಾಧ್ಯಾಯಿನಿ ನಿಶಾ ಸ್ವಾಗತಿಸಿದರು. ಶಿಕ್ಷಕರಾದ ರೋಷನ್​ ವಂದಿಸಿದರು. ವಿದ್ಯಾರ್ಥಿಗಳಾದ ವಲ್ಲರಿ, ಕೇನಿಷಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net