

ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳು ಕೇವಲ ಇಂಗ್ಲಿಷ್ ಭಾಷೆ ಭಯದಿಂದ ಹಿಂದೆ ಬೀಳಬಾರದು. ಅಡಿಪಾಯದ ಹಂತದಲ್ಲೇ ಅವರಿಗೆ ಉತ್ತಮ ಭಾಷಾ ಜ್ಞಾನ ನೀಡುವ ಉದ್ದೇಶ ನಮ್ಮದು. ಪಾಲಕರು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು. ಹಳೇ ವಿದ್ಯಾರ್ಥಿಗಳ ಹಾಗೂ ದಾನಿಗಳ ನೆರವಿನಿಂದ ಈ ಯೋಜನೆಗೆ ಚಾಲನೆ ದೊರಕಿದ್ದು, ಈಗಾಗಲೇ ದಾಖಲಾತಿ ಆರಂಭಗೊಂಡು ಒಂದಷ್ಟು ವಿದ್ಯಾರ್ಥಿಗಳ ದಾಖಲಾತಿ ಪಡೆದಿದ್ದಾರೆ.