ಉಡುಪಿಗೆ ಇಂಜಿನಿಯರ್ಸ್​ ಕೊಡುಗೆ ಶ್ಲಾಘನೀಯ

ಉಡುಪಿಯಲ್ಲಿ ಯುಸಿಇಎ ಆಯೋಜಿಸಿದ್ದ ಇಂಜಿನೀಯರ್ಸ್​ ಮೀಟ್​ ಕಾರ್ಯಕ್ರಮದಲ್ಲಿ ಮಂಜುನಾಥ್​ ಅವರನ್ನು ಗೌರವಿಸಲಾಯಿತು. ಕೆ.ರಂಜನ್​, ಗಣೇಶ್​ ಬೈಲೂರು, ಭರತ್​ ಭೂಷಣ್​, ಕೆ. ಹರೀಶ್​ ಕುಮಾರ್​ ಇದ್ದರು.
ಉಡುಪಿಯಲ್ಲಿ ಯುಸಿಇಎ ಆಯೋಜಿಸಿದ್ದ ಇಂಜಿನೀಯರ್ಸ್​ ಮೀಟ್​ ಕಾರ್ಯಕ್ರಮದಲ್ಲಿ ಮಂಜುನಾಥ್​ ಅವರನ್ನು ಗೌರವಿಸಲಾಯಿತು. ಕೆ.ರಂಜನ್​, ಗಣೇಶ್​ ಬೈಲೂರು, ಭರತ್​ ಭೂಷಣ್​, ಕೆ. ಹರೀಶ್​ ಕುಮಾರ್​ ಇದ್ದರು.
Published on

* ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ್​ ಅನಿಸಿಕೆ

ಉಡುಪಿ: ಭವಿಷ್ಯದ ದೃಷ್ಟಿಯಿಂದ ಉಡುಪಿಯ ಅಭಿವೃದ್ಧಿಗೆ ಮಾಸ್ಟರ್​ ಪ್ಲ್ಯಾನ್​ ತಯಾರಿಸಲಾಗಿದೆ. ಉಡುಪಿ ಪ್ರಸಿದ್ಧಿಯ ಜತೆಗೆ ರಸ್ತೆ, ಕಟ್ಟಡಗಳ ನಿರ್ಮಾಣ ಕ್ಷೇತ್ರದ ವೇಗದಲ್ಲಿ ಪ್ರಗತಿ ಹೊಂದುವಲ್ಲಿ ಇಲ್ಲಿನ ಇಂಜಿನಿಯರ್ಸ್​ಗಳ ಕೊಡುಗೆ ಶ್ಲಾಘನೀಯ. ಉಡುಪಿ ನಗರದ ಸೌಂದರ್ಯ ಹೆಚ್ಚಳಕ್ಕೂ ಸಹ ಕೈ ಜೋಡಿಸಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ್​ ಕರೆ ನೀಡಿದರು.
ಉಡುಪಿಯ ಕಿದಿಯೂರು ಹೋಟೆಲ್​ನ ಅನಂತಶಯನ ಹಾಲ್​ನಲ್ಲಿ ಸಿವಿಲ್​ ಇಂಜಿನಿಯರ್ಸ್​ ಅಸೋಸಿಯೇಷನ್​ (ಯುಸಿಇಎ) ವತಿಯಿಂದ ಆಯೋಜಿಸಿದ್ದ ಇಂಜಿನಿಯರ್ಸ್​ ಮೀಟ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿಗೆ ನಿಮಾರ್ಣಗೊಂಡ 'ಅಭಿನಯ' ಕಿರುಚಿತ್ರ ಪ್ರದರ್ಶಿಸಲಾಯಿತು. ಸಂಸ್ಥೆಯ ವತಿಯಿಂದ ಗಣೇಶ್​ ಕಾಂಡ್ಲೂರು ಅವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷರಾದ ಗಣೇಶ್​ ಬೈಲೂರು, ಭರತ್​ ಭೂಷಣ್​, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥರಿದ್ದರು. ಸಂಸ್ಥೆಯ ಅಧ್ಯಕ್ಷ ಕೆ.ರಂಜನ್​ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ಹರೀಶ್​ ಕುಮಾರ್​ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net