ಗ್ರಾಮೀಣ ಬಡ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ

 ಆಸರೆ ಕಾರ್ಯಕ್ರಮದಲ್ಲಿ ಕೆ.ರಕ್ಷಾ ಅವರನ್ನು ಸನ್ಮಾನಿಸಲಾಯಿತು. ರಾಜೇಶ್ ಶೆಟ್ಟಿ ಶಬರಿ, ಶೀನಶೆಟ್ಟಿ ಮತ್ತು ಕೃಷ್ಣಮೂಲ್ಯ ಮೊದಲಾದವರಿದ್ದರು.
ಆಸರೆ ಕಾರ್ಯಕ್ರಮದಲ್ಲಿ ಕೆ.ರಕ್ಷಾ ಅವರನ್ನು ಸನ್ಮಾನಿಸಲಾಯಿತು. ರಾಜೇಶ್ ಶೆಟ್ಟಿ ಶಬರಿ, ಶೀನಶೆಟ್ಟಿ ಮತ್ತು ಕೃಷ್ಣಮೂಲ್ಯ ಮೊದಲಾದವರಿದ್ದರು.
Published on
ಬಂಟ್ವಾಳ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುವಲ್ಲಿ ಮುಡಿಪು ಚಿತ್ತಾರ ಬಳಗವು ಅನುಷ್ಠಾನಗೊಳಿಸಿರುವ ಕಾರ್ಯಕ್ರಮವು ಇತರರಿಗೂ ಮಾದರಿಯಾಗಿದೆ ಎಂದು ಮಂಗಳೂರು ಪಂಪ್‌ವೆಲ್ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ರಾಜೇಶ್ ಶೆಟ್ಟಿ ಶಬರಿ ಹೇಳಿದರು.
ಚಿತ್ತಾರ ಬಳಗದ ವತಿಯಿಂದ ಜನಶಿಕ್ಷಣ ಟ್ರಸ್ಟ್ ಮತ್ತು ಜನಜೀವನ ಬಾಳೆಪುಣಿ ಸಹಭಾಗಿತ್ವದಲ್ಲಿ ಮುಡಿಪು ಜನಶಿಕ್ಷಣ ಟ್ರಸ್ಟ್‌ನ ಸರ್ವೋದಯ ಮಂಟಪದಲ್ಲಿ ಏರ್ಪಡಿಸಲಾದ ಆಸರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟ್ರಸ್ಟ್ ನಿರ್ದೇಶಕರಾದ ಶೀನಶೆಟ್ಟಿ ಮತ್ತು ಕೃಷ್ಣಮೂಲ್ಯ, ಹಿರಿಯ ಪತ್ರಕರ್ತ ಮೊಹಮ್ಮದ್ ಆರೀಫ್ ಪಡುಬಿದ್ರಿ ಉಪಸ್ಥಿತರಿದ್ದರು. ಹತ್ತು ಮಂದಿ ಅರ್ಹ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಧನ,ಬಡಮಹಿಳೆಯೊಬ್ಬರ ಮನೆ ನಿರ್ಮಾಣಕ್ಕೆ ನೆರವು, ಒಬ್ಬರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು. ಎಸೆಸೆಲ್ಸಿ ಪರೀಕ್ಷೆಯಲ್ಲಿ 603 ಅಂಕ ಗಳಿಸಿದ ಕೆ.ರಕ್ಷಾ ಅವರನ್ನು ಸನ್ಮಾನಿಸಲಾಯಿತು.
ಚಿತ್ತಾರ ಬಳಗದ ಸಂಚಾಲಕ ಸತೀಶ್ ಸ್ವಾಗತಿಸಿ, ಬಳಗದ ಸದಸ್ಯ ಸಂತೋಷ್ ಶೆಟ್ಟಿ ವಂದಿಸಿದರು. ಬಳಗದ ಸದಸ್ಯರಾದ ಚಂದ್ರಶೇಖರ ಪಾತೂರು ಹಾಗೂ ವೆಂಕಟೇಶ್ ಮುಡಿಪು ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net