ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ

  ಆಸಾಡಿ ಗಮ್ಮತ್ ಕಾರ್ಯಕ್ರಮದಲ್ಲಿ ಆಶಾ ಭಟ್ ಅವರನ್ನು ಗೌರವಿಸಲಾಯಿತು. ಪ್ರಮುಖರಾದ  ವಾಣಿಶ್ರೀ ಹೆಬ್ಬಾರ್, ವಾದಿರಾಜ್ ಹೆಬ್ಬಾರ್, ಪ್ರೊ.ವೆಂಕಟಕೃಷ್ಣ ಐತಾಳ್, ವೈ.ಎನ್.ವೆಂಕಟೇಶಮೂರ್ತಿ ಭಟ್ ಮತ್ತಿತರರಿದ್ದರು.
ಆಸಾಡಿ ಗಮ್ಮತ್ ಕಾರ್ಯಕ್ರಮದಲ್ಲಿ ಆಶಾ ಭಟ್ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ವಾಣಿಶ್ರೀ ಹೆಬ್ಬಾರ್, ವಾದಿರಾಜ್ ಹೆಬ್ಬಾರ್, ಪ್ರೊ.ವೆಂಕಟಕೃಷ್ಣ ಐತಾಳ್, ವೈ.ಎನ್.ವೆಂಕಟೇಶಮೂರ್ತಿ ಭಟ್ ಮತ್ತಿತರರಿದ್ದರು.
Published on
ಕುಂದಾಪುರ: ಮಹಿಳೆಯರು ಯಾವ ಊರಿನವರು, ಯಾರ ಕುಟುಂಬದವರು ಎಂಬುದು ಮುಖ್ಯವಲ್ಲ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಮಹಿಳೆಯರಿಗೆ ಮಹಿಳೆಯರೇ ಶತ್ರುಗಳಾಗಬಾರದು ಎಂದು ಆಸ್ಟ್ರೇಲಿಯಾದ ಸದರ್ನ್ ಅಬೋರಿಜಿನಲ್ ಕಾರ್ಪೋರೇಷನ್‌ನ ಸಿಇಒ ಆಶಾ ಭಟ್ ಹೇಳಿದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಕೋಟೇಶ್ವರ ವಲಯದ ಆಶ್ರಯದಲ್ಲಿ ಕೋಟೇಶ್ವರದ ಶ್ರೀ ಕೋದಂಡರಾಮ ಮಂದಿರದಲ್ಲಿ ‘ಊರ್ಮನಿ ತಿಂಡಿ‘ಗಳ ಸೊಗಡನ್ನು ಪರಿಚಯಿಸುವ ಆಸಾಡಿ ಗಮ್ಮತ್-2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ವಲಯಾಧ್ಯಕ್ಷ ವಾದಿರಾಜ್ ಹೆಬ್ಬಾರ್ ಶುಭಾಶಂಸನೆಗೈದರು. ಕೋಟೇಶ್ವರ ರೋಟರಿ ಅಧ್ಯಕ್ಷೆಯಾಗಿ ಆಯ್ಕೆಯಾದ ಅಕ್ಷತಾ ಗಿರೀಶ್ ಐತಾಳ ಅವರನ್ನು ಗೌರವಿಸಲಾಯಿತು. ಲಕ್ಕಿ ಡ್ರಾ ವಿಜೇತರಿಗೆ ವಲಯದ ಹಿರಿಯ ಸದಸ್ಯ ಪ್ರೊ.ವೆಂಕಟಕೃಷ್ಣ ಐತಾಳ್ ನಗದು ಬಹುಮಾನ ಹಸ್ತಾಂತರಿಸಿದರು.
ಶ್ರೀ ಕೋದಂಡರಾಮ ಮಂದಿರದ ಕಾರ್ಯದರ್ಶಿ ವೈ.ಎನ್.ವೆಂಕಟೇಶಮೂರ್ತಿ ಭಟ್, ಕೋಶಾಧಿಕಾರಿ ಗಜೇಂದ್ರ ಹೆಬ್ಬಾರ್, ವಲಯ ಗೌರವಾಧ್ಯಕ್ಷ ಗಣಪಯ್ಯ ಚಡಗ, ವಿಪ್ರವಾಣಿ ಸಂಪಾದಕ ಪ್ರೊ.ಶಂಕರ ರಾವ್ ಕಾಳಾವರ, ವಿವಿಧ ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಮತ್ತು ಕಾರ್ಯದರ್ಶಿ ನಾಗರತ್ನ ಉಡುಪರ ನಿರ್ದೇಶನದಲ್ಲಿ ಮಹಿಳೆಯರಿಗಾಗಿ ಮನೋರಂಜನಾತ್ಮಕ ಸ್ಪರ್ಧೆಗಳನ್ನು ನಡೆಸಲಾಯಿತು.
ವೀಣಾ ರವಿಚಂದ್ರ ಪ್ರಾರ್ಥಿಸಿದರು. ಕಾರ್ಯದರ್ಶಿ ನಾಗರತ್ನ ಉಡುಪ ಸ್ವಾಗತಿಸಿದರು. ಡಾ.ಪ್ರತಿಭಾ ಕಾರಂತ ಸನ್ಮಾನ ಪತ್ರ ವಾಚಿಸಿದರು. ನಿರ್ಮಲಾ ಭಟ್, ಸೌಮ್ಯಾ ಉಡುಪ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಮಾಶ್ರೀ ಧನ್ಯ ಕಾರ್ಯಕ್ರಮ ನಿರ್ವಹಿಸಿದರು. ಗಾಯತ್ರೀ ಹಂದೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net