ಹೊಸಾಡು ಗ್ರಾಪಂ ಕಚೇರಿಯಲ್ಲಿ ಮಕ್ಕಳ ಚಟುವಟಿಕಾ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಿತು. ಪ್ರಮುಖರಾದ ನಾಗೇಶ ನಾಯ್ಕ, ಕೃಪಾ ಎಂ.ಎಂ., ಶೋಭಾ, ಕೆ.ಆರ್.ನಾಯ್ಕ, ಸತೀಶ್ ಹೆಗ್ಡೆ, ಕೀರ್ತನ್, ಸಂಜೀವ ಉಪಸ್ಥಿತರಿದ್ದರು.
Published on:
Copied
Follow Us
ಕುಂದಾಪುರ: ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ಆ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ಹೇಳಿದರು.
ಹಟ್ಟಿಯಂಗಡಿ ಕನ್ಯಾನದ ಸಿಡಬ್ಲುೃಸಿ ನಮ್ಮ ಭೂಮಿ ವತಿಯಿಂದ ಹೊಸಾಡು ಗ್ರಾಪಂ ಸಹಯೋಗದೊಂದಿಗೆ ಹೊಸಾಡು ಗ್ರಾಪಂ ಕಚೇರಿಯಲ್ಲಿ ಗುರುವಾರ ಮಕ್ಕಳ ಚಟುವಟಿಕಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಿಡಬ್ಲುೃಸಿ ನಮ್ಮ ಭೂಮಿ ಸಂಸ್ಥೆ ಸಹ ನಿರ್ದೇಶಕಿ ಕೃಪಾ ಎಂ.ಎಂ. ಮಾತನಾಡಿದರು. ಹೊಸಾಡು ಪಿಡಿಒ ಶೋಭಾ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯ್ಕ, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಸತೀಶ್ ಹೆಗ್ಡೆ ಶುಭಾಶಂಸನೆಗೈದರು. ಸೇಲ್ಸ್ ಫೋರ್ಸ್ ಸಂಸ್ಥೆಯ ಕೀರ್ತನ್, ಲೋಕಧ್ವನಿ ಸಂಸ್ಥೆಯ ಸಂಜೀವ ಉಪಸ್ಥಿತರಿದ್ದರು. ನಮ್ಮ ಭೂಮಿ ಸಂಸ್ಥೆಯ ನರಸಿಂಹ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ ಗೌಡ ವಂದಿಸಿದರು.