ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಧರೆಗೆ

 ಹೆಬ್ರಿ ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗಿರುವುದು.
ಹೆಬ್ರಿ ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹೆಬ್ರಿ ತಾಲೂಕಿನಲ್ಲಿ ಭಾರಿ ಗಾಳಿ-ಮಳೆ
  • ವಿದ್ಯುತ್ ಸರಬರಾಜು ಸ್ಥಗಿತ
  • 100ಕ್ಕೂ ಹೆಚ್ಚು ವಿದ್ಯುತ್ ಸರಬರಾಜು ಕಂಬಗಳು ತುಂಡು
ಹೆಬ್ರಿ: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಹಲವಾರು ಮರಗಳು ಬಿದ್ದು ವಿದ್ಯುತ್ ಕಂಬಗಳು ತುಂಡಾಗಿದೆ. ತೆಂಗು ಅಡಿಕೆ ಮರಗಳು ಭಾರಿ ಗಾಳಿಗೆ ಬಿದ್ದು ಅಪಾರ ನಷ್ಟ ಉಂಟಾಗಿದೆ.
ಹೆಬ್ರಿ, ನಾಡ್ಪಾಲು ಮತ್ತು ಅಜೆಕಾರು ಪರಿಸರದಲ್ಲಿ ಮರಗಳು ಬಿದ್ದು ಅತಿ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿವೆ. ಶಿವಪುರ, ಖಜಾನೆ, ಬೇಳಂಜೆ, ಮುದ್ರಾಡಿ, ಶಿರ್ಲಾಲು, ಕಾಡುಹೊಳೆ ಸೇರಿದಂತೆ ಹಲವೆಡೆ ಅಪಾರ ಹಾನಿಯಾಗಿದೆ.
ಮೆಸ್ಕಾಂ ಹೆಬ್ರಿ ಉಪವಿಭಾಗದ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ವಿದ್ಯುತ್ ಸರಬರಾಜು ಕಂಬಗಳು ತುಂಡಾಗಿ ಮಂಗಳವಾರ ರಾತ್ರಿಯಿಂದಲೇ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ಮೆಸ್ಕಾಂ ಎಇಇ ನಾಗರಾಜ್, ಜೆಇಗಳಾದ ಲಕ್ಷ್ಮೀಶ್ ಮತ್ತು ಸಂದೀಪ್ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಹೆಬ್ರಿ ತಾಲೂಕು ಕಚೇರಿ ಬಳಿ ಮರ ವಿದ್ಯುತ್ ಲೈನ್ ಮೇಲೆ ಬಿದ್ದು ಹಾನಿಯಾಗಿದೆ. ಅಜೆಕಾರು ಗುಡ್ಡೆಯಂಗಡಿ ಬಸ್ ನಿಲ್ದಾಣದ ಹೆಂಚು ಗಾಳಿಗೆ ಹಾರಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net