ಪ್ರತಿ ದಿನ ಪೇಟೆಗೆ ಹೋಗಿ ಬರುತ್ತಿದ್ದ ಅವರು ಜುಲೈ 6ರಂದು ಕಾಪುವಿಗೆ ಹೋಗಿಬರುವುದಾಗಿ ಮನೆಯವರಿಗೆ ತಿಳಿಸಿ ತೆರಳಿದ್ದರು. ರಾತ್ರಿಯಾದರೂ ಮನಗೆ ವಾಪಸ್ ಬಾರದೆ ಇದ್ದು, ಎಲ್ಲರೂ ಸೇರಿ ಪರಿಸರದ ಸುತ್ತ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅವರು ತೆಗೆದುಕೊಂಡು ಹೋಗಿದ್ದ ಕೊಡೆ ಹಾಗೂ ಚಪ್ಪಲಿಗಳು ಹಾಡಿಯಲ್ಲಿ ಸಿಕ್ಕಿದ್ದು, ಬುಧವಾರ ಮನೆಯಿಂದ 2 ಕಿ.ಮೀ. ದೂರದ ಬಾವಿಯಲ್ಲಿ ಅವರ ಮೃತದೇಹ ತೇಲಾಡುತ್ತಿರುವುದನ್ನು ಸ್ಥಳೀಯರು ಮನೆಯವರಿಗೆ ತಿಳಿಸಿದ್ದರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.